Friday, April 26, 2024
spot_imgspot_img
spot_imgspot_img

‘ಟೊಮೆಟೊ ಜ್ವರ’ಕ್ಕೂ ‘ಕೋವಿಡ್-19’ಗೂ ಸಂಬಂಧವಿಲ್ಲ, ಆತಂಕ ಬೇಡ.!!

- Advertisement -G L Acharya panikkar
- Advertisement -

ಟೊಮೇಟೊ ಫ್ಲೋ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಇದು ಐದು ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬರುವ ಖಾಯಿಲೆಯಾಗಿದ್ದು, ಕೋವಿಡ್ ಗೂ ಟೊಮೆಟೊ ಫ್ಲೂ ಗೂ ಸಂಬಂಧ ಇಲ್ಲ ಇದೊಂದು ಪ್ರತ್ಯೇಕ ವೈರಸ್ ಎಂದು ಡಿಎಚ್ಒ ಡಾಕ್ಟರ್ ನಾಗಭೂಷಣ್ ಮಾಹಿತಿ ನೀಡಿದ್ದಾರೆ.

Tomato Flu, ಕೇರಳದಲ್ಲಿ ಟೊಮೇಟೊ ಫ್ಲೂ ! 80 ಮಕ್ಕಳಲ್ಲಿ ಈ ವೈರಸ್ ಪತ್ತೆ

ಟೊಮೆಟೊ ಫ್ಲೂ ಚರ್ಮದಲ್ಲಿ ತುರಿಕೆ ಜ್ವರ ಮೈಕೈ ನೋವು ಸುಸ್ತು ಸಾಮಾನ್ಯ ಲಕ್ಷಣಗಳು ಇರಲಿದ್ದು, ಎಲ್ಲಾ ಖಾಸಗಿ ಮತ್ತು ಸರಕಾರಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಿಗೆ ಮುನ್ನೆಚ್ಚರಿಕೆ ನೀಡಿದ್ದೇವೆ. ಇಂತಹ ಪ್ರಕರಣಗಳು ಕಂಡುಬಂದರೆ ಆರೋಗ್ಯ ಇಲಾಖೆಗೆ ಸೂಚಿಸುವಂತೆ ಹೇಳಿದ್ದೇವೆ .

ಉಡುಪಿ ಜಿಲ್ಲೆಗೆ ಕೇರಳದ ಗಡಿಭಾಗ ಇಲ್ಲ, ಆದರೆ ಕೇರಳದಿಂದ ಅನೇಕ ಪ್ರಯಾಣಿಕರು ಬರುತ್ತಾರೆ. ಕೊಲ್ಲೂರು ಸೇರಿದಂತೆ ದೇವಾಲಯಗಳಿಗೆ ಜನರು ಬರುತ್ತಾರೆ ಈ ಹಿನ್ನಲೆ ಸೂಕ್ಷ್ಮ ಭಾಗಗಳಲ್ಲಿ ವಿಶೇಷ ಮುತುವರ್ಜಿ ವಹಿಸಲಾಗುವುದು. ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮಕ್ಕಳ ಕ್ಲಿನಿಕ್ ಗಳು ಇಂತಹ ಪ್ರಕರಣ ಕಂಡುಬಂದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಎಂದು ತಿಳಿಸಲಾಗಿದ್ದು, ಪೋಷಕರು ಆತಂಕ ಪಡದೆ ಲಕ್ಷಣ ಕಂಡುಬಂದರೆ ವೈದ್ಯರಿಗೆ ತಿಳಿಸಿ ಎಂದು ಡಿಎಚ್ ಓ ತಿಳಿಸಿದ್ದಾರೆ.

- Advertisement -

Related news

error: Content is protected !!