Saturday, May 18, 2024
spot_imgspot_img
spot_imgspot_img

ಟೊಮ್ಯಾಟೋ ಹಣ್ಣಿನಿಂದ ಅಗುವ ಆರೋಗ್ಯಕಾರಿ ಬೆನಿಫಿಟ್ಸ್

- Advertisement -G L Acharya panikkar
- Advertisement -

ನಿತ್ಯದ ಅಡುಗೆಯಲ್ಲಿ ನಾವು ಟೊಮೆಟೊ ಬಳಸುತ್ತೇವೆ. ಟೊಮೆಟೊ ಆರೋಗ್ಯಕ್ಕೆ ಉತ್ತಮ ಗುಣಮಟ್ಟದ ಪೌಷ್ಠಿಕಾಂಶ ನೀಡುತ್ತದೆ. ಸುಲಭ ಬೆಲೆಗೆ ಸಿಗುವ ಟೊಮೆಟೊ ಹಣ್ಣು ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಗೆ ರೋಗ ನಿರೋಧಕವಾಗಿದೆ.

ಟೊಮೆಟೊ ಬೊಜ್ಜು ನಿರೋಧಕ ಶಕ್ತಿ ಹೊಂದಿದೆ. ಪ್ರತಿ ಮುಂಜಾನೆ ತಿಂಡಿಗೂ ಮುನ್ನ ಒಂದೆರಡು ಟೊಮೆಟೊ ತಿಂದು ಬೊಜ್ಜನ್ನು ಕರಗಿಸಿಕೊಳ್ಳಬಹುದು. ಟೊಮೆಟೊ ಪ್ರತಿನಿತ್ಯ ಸೇವಿಸಿದರೆ ಹೃದಯವನ್ನು, ಲಿವರನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ಸೂರ್ಯ ಕಿರಣಗಳಿಂದಾಗುವ ಚರ್ಮದ ತೊಂದರೆಗಳನ್ನು ಕೂಡ ಟೊಮೆಟೊ ದೂರವಿಡುತ್ತದೆ. ಅಲ್ಲದೆ ಗರ್ಭಿಣಿಯರು ಟೊಮೆಟೊವನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡಿದರೆ ಶಿಶುವನ್ನು ನರ ಸಂಬಂಧ ಕಾಯಿಲೆಯಿಂದ ದೂರವಿಡಲು ನೆರವಾಗುತ್ತದೆ.

ಟೊಮೆಟೊದಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮೆಗ್ನೇಸಿಯಂ ಮುಂತಾದ ಲವಣಗಳಿವೆ. ವಿಟಮಿನ್ ಸಿ ಮತ್ತು ಎ ಅಂಶವಿದೆ.

ಟೊಮೆಟೊ ರಸ ಹೊಟ್ಟೆಯನ್ನು ಸ್ವಚ್ಛ ಮಾಡುತ್ತದೆ. ಅಜೀರ್ಣ, ವಾಯು, ಮಲಬದ್ಧತೆ ಟೊಮೆಟೊ ನಿವಾರಿಸುತ್ತದೆ. ಟೊಮೆಟೊದಲ್ಲಿ ಕಬ್ಬಿಣ ಅಂಶವಿರುತ್ತದೆ. ಆದ್ದರಿಂದ ರಕ್ತಹೀನತೆಯಿಂದ ಬಳಲುತ್ತಿದ್ದವರಿಗೆ ಇದು ಒಳ್ಳೆಯ ಮದ್ದಾಗಿದೆ.


ತ್ವಚೆ, ಕೂದಲು, ಉಗುರಿನ ಆರೋಗ್ಯಕ್ಕೆ ದೇಹದಲ್ಲಿರುವ ಕೊಲಾಜಿನ್ ಅಂಶ ಪ್ರಮುಖ ಕಾರ್ಯ ನಿರ್ವಹಿಸುತ್ತದೆ. ಈ ಕೊಲಾಜಿನ್ ದೇಹದಲ್ಲಿ ಉತ್ಪತ್ತಿಯಾಗಲೂ ವಿಟಮಿನ್ ಸಿ ಅಗತ್ಯ. ಒಂದು ವೇಳೆ ವಿಟಮಿನ್ ಸಿ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಸಿಗದಿದ್ದರೆ, ಚರ್ಮದ ಸಮಸ್ಯೆ ಬರುತ್ತದೆ. ಆದ್ದರಿಂದ ಟೊಮೆಟೋದಲ್ಲಿ ವಿಟಮಿನ್ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ಹೀಗಾಗಿ ಇದನ್ನು ಮಿತವಾಗಿ ಸೇವಿಸಿದರೆ, ಇದು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕಾರಿಯಾಗುತ್ತದೆ.

- Advertisement -

Related news

error: Content is protected !!