Saturday, June 28, 2025
spot_imgspot_img
spot_imgspot_img

ಡ್ರಗ್ ಕೊಟ್ಟು ಯುವತಿಯನ್ನು ಅತ್ಯಾಚಾರಗೈದ ಬಾಡಿ ಬಿಲ್ಡರ್..!

- Advertisement -
- Advertisement -
vtv vitla
vtv vitla

ಬಾಡಿ ಬಿಲ್ಡರ್ ಓರ್ವ ಯುವತಿಗೆ ಡ್ರಗ್ ನೀಡಿ ಅತ್ಯಾಚಾರ ನಡೆಸಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಅತ್ಯಾಚಾರ ಆರೋಪ ಹಿನ್ನೆಲೆಯಲ್ಲಿ ಬಾಣಸವಾಡಿ ಜಿಮ್ ಟ್ರೇನರ್, ಬಾಡಿ ಬಿಲ್ಡರ್ ಸೈಯದ್ ಸಿದ್ದಕಿಯನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ 23 ವರ್ಷದ ಯುವತಿಗೆ ಡ್ರಗ್ ನೀಡಿ ಅತ್ಯಾಚಾರ ನಡೆಸಿದ್ದಾನೆ. ಬಳಿಕ ವಿವಾಹವಾಗುವುದಾಗಿ ನಂಬಿಸಿ ಮತ್ತೆ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಆರೋಪಿ ಸಯ್ಯದ್ ಅಂತರಾಷ್ಟ್ರೀಯ ಸ್ಪರ್ಧೆ ಬಾಡಿ ಬಿಲ್ಡರ್ ಆಗಿದ್ದಾನೆ. ಈಕೆಗೆ ಈಗಾಗಲೇ ಮದುವೆಯಾಗಿದೆ. ಸಂತ್ರಸ್ತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೆ.ಜಿ.ಹಳ್ಳಿ ಠಾಣೆಯಲ್ಲಿ ಆರೋಪಿ ಸೈಯ್ಯದ್ ಸಿದ್ದಕಿ, ಆತನ ಪತ್ನಿ ಫಾಸಿಯಾ ರೆಹಮಾನ್ ಹಾಗೂ ಪತ್ನಿ ಸಹೋದರ ಸಾಧಿಕ್ ವಿರುದ್ಧವೂ ಎಫ್ ಐ ಆರ್ ದಾಖಲಾಗಿದೆ.

- Advertisement -

Related news

error: Content is protected !!