Friday, May 17, 2024
spot_imgspot_img
spot_imgspot_img

ತಂಬಾಕು ಉತ್ಪನ್ನಗಳಿಗೆ ಜಿಎಸ್​ಟಿ, ಅಬಕಾರಿ ಸುಂಕ; ಕೇಂದ್ರ ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್

- Advertisement -G L Acharya panikkar
- Advertisement -
suvarna gold

ಬೆಂಗಳೂರು: ಕೇಂದ್ರ ಸರ್ಕಾರ ತಂಬಾಕು ಉತ್ಪನ್ನಗಳಿಗೆ ವಿವಿಧ ಬಗೆಯ ಸುಂಕ, ಜಿಎಸ್​​ಟಿ (GST),‌ ಅಬಕಾರಿ, ರಾಷ್ಟ್ರೀಯ ವಿಪತ್ತು ಸುಂಕ ಹೇರಿದೆ. ಆದರೆ ಇದನ್ನು ಒಪ್ಪದ ಕೆಲವು ತಂಬಾಕು ಕಂಪನಿಗಳು ವಿವಿಧ ಬಗೆಯ ಸುಂಕ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ ಹೈಕೋರ್ಟ್ ಇಂದುತಂಬಾಕು ಕಂಪನಿಗಳ ವಾದ ತಿರಸ್ಕರಿಸಿದೆ. ಅಲ್ಲದೇ ಸುಂಕ ನೀತಿ ಸಂವಿಧಾನಬದ್ಧವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ವಿ.ಎಸ್.ಪ್ರಾಡಕ್ಟ್ಸ್​ ಸೇರಿ ಹಲವು ತಂಬಾಕು ಉತ್ಪಾದಕರು ಮತ್ತು ತಂಬಾಕು ಉತ್ಪನ್ನಗಳ ಉತ್ಪಾದಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯದೀಶರಾದ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ವಿಚಾರಣೆ ನಡೆಸಿದೆ. ಏಕಕಾಲದಲ್ಲಿ ತಂಬಾಕು ಉತ್ಪನ್ನಗಳ ಮೇಲೆ ಜಿಎಸ್​​​ಟಿ, ಅಬಕಾರಿ ಸುಂಕ ಮತ್ತು ರಾಷ್ಟ್ರೀಯ ವಿಪತ್ತು ಸಂಕಷ್ಟ ಸುಂಕವನ್ನು ವಿಧಿಸುವ ಕೇಂದ್ರ ಸರ್ಕಾರದ ಕಾನೂನನ್ನು ಪ್ರಶ್ನಿಸಿ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ತನ್ನ ತೀರ್ಮಾನವನ್ನು ಹೇಳಿದೆ.

ಕಲಂ 254ಎಗೆ ತಿದ್ದುಪಡಿ ಮಾಡಿ ಸರಕು ಮತ್ತು ಸೇವಾ ತೆರಿಗೆ ಆಡಳಿತ ಕಾನೂನುಗಳನ್ನು ಮಾಡುವ ಅಧಿಕಾರ ಹೊಂದಿದ್ದರೂ ಸಹ, 246 ಮತ್ತು 246 ಎ ವಿಧಿಯಡಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಅಬಕಾರಿ ಸುಂಕಗಳನ್ನು ವಿಧಿಸುವ ಅಧಿಕಾರ ಹೊಂದಿದೆ. ಹಾಗಾಗಿ ಕಾನೂನುಗಳು ಸಿಂಧುವಾಗುತ್ತವೆ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

ಹಂತ ಹಂತವಾಗಿ ಕೋರ್ಟ್ ಕಲಾಪ ನೇರಪ್ರಸಾರ: ಹೈಕೋರ್ಟ್ ಕೋರ್ಟ್ ಕಲಾಪಗಳ ನೇರ ಪ್ರಸಾರ ವಿಚಾರಕ್ಕೆ ಸಂಬಂಧಪಟ್ಟಂತೆ ವಿಚಾರಣಾ‌ ನ್ಯಾಯಾಲಯಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಈ ಬಗ್ಗೆ ಸುಪ್ರೀಂಕೋರ್ಟ್ ನಿರ್ದೇಶನ ಅನುಷ್ಠಾನಗೊಳಿಸಬೇಕು. ಹಂತ ಹಂತವಾಗಿ ಕೋರ್ಟ್ ಕಲಾಪ ನೇರಪ್ರಸಾರ ಮಾಡಬೇಕು. ಇದಕ್ಕೆ ಪೂರಕ ಸೌಕರ್ಯ ಸರ್ಕಾರ ಕಲ್ಪಿಸಬೇಕು. ಶೀಘ್ರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!