Tuesday, May 14, 2024
spot_imgspot_img
spot_imgspot_img

ತನ್ನ ಸಾಕು ನಾಯಿಯೊಂದಿಗೆ ಲೈಂಗಿಕ ಅತ್ಯಾಚಾರ ನಡೆಸಿದ 60 ವರ್ಷದ ಪಾಪಿ!!

- Advertisement -G L Acharya panikkar
- Advertisement -

ಮನೆಯ ಸಾಕು ಪ್ರಾಣಿ ನಾಯಿಯ ಮೇಲೆ 60 ವರ್ಷದ ವ್ಯಕ್ತಿಯೊಬ್ಬ 2 ವರ್ಷಗಳ ಕಾಲ ಅತ್ಯಾಚಾರ ನಡೆಸಿದ ಘಟನೆ ಕೋಲ್ಕತ್ತದ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ರತಿಕಾಂತ್ ಸರ್ದಾರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಈ ಘಟನೆ ಬಗ್ಗೆ ಸ್ಥಳೀಯರೊಬ್ಬರು ಮಾತನಾಡಿ, ಸರ್ದಾರ್ ಸುಮಾರು 2 ವರ್ಷಗಳಿಂದ ತನ್ನ ಸಾಕು ನಾಯಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಹಾಗೂ ನಾಯಿಯನ್ನು ಅಂತಹ ಕೃತ್ಯದಿಂದ ದೂರವಿರುವಂತೆ ಪದೇ ಪದೇ ಕೇಳಿಕೊಂಡಿದ್ದೆವು. ಆದರೆ ಆತ ಮಾತನ್ನು ಕೇಳಲು ನಿರಾಕರಿಸುತ್ತಿದ್ದ ಎಂದು ಹೇಳಿದರು. ಆದರೆ ನಾಯಿ ಕೂಗುತ್ತಿದ್ದಂತೆ ಸ್ಥಳೀಯರು ಸರ್ದಾರ್ ಅನ್ನು ಅಮಲೇರಿದ ಮತ್ತು ಬಟ್ಟೆಯಿಲ್ಲದ ಸ್ಥಿತಿಯಲ್ಲಿ ಗುರುತಿಸಿದ್ದಾರೆ. ಅದಾದ ಬಳಿಕ ರತಿಕಾಂತ್ ನಾಯಿಯ ಮೇಲೆ ಅತ್ಯಾಚಾರ ನಡೆಸಿದ ಕೃತ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯರು ಹರಿಬಿಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿ ಪ್ರೇಮಿಗಳ ಸಂಘಟನೆಯ ಸದಸ್ಯರೊಬ್ಬರು ಸೋನಾರ್‌ಪುರ ಪೊಲೀಸ್ ಠಾಣೆಯಲ್ಲಿ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಪ್ರಾಣಿ ಸಂರಕ್ಷಣಾ ಸಂಘಟನೆಯ ಸದಸ್ಯರು, ಈ ವಿಡಿಯೋವನ್ನು ಸ್ಥಳೀಯರು ಒಂದು ವರ್ಷದ ಹಿಂದೆ ಚಿತ್ರೀಕರಿಸಿದ್ದಾರೆ.ಅವರಿಗೆ ಪ್ರಾಣಿ ಸಂರಕ್ಷಣಾ ಕಾಯಿದೆಗಳ ಬಗ್ಗೆ ತಿಳಿದಿರಲಿಲ್ಲ, ಹೀಗಾಗಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ತಿಳಿಸಿದರು.

- Advertisement -

Related news

error: Content is protected !!