Sunday, June 14, 2026
spot_imgspot_img
spot_imgspot_img

ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ವಿಟ್ಲದ ವಿದ್ಯಾರ್ಥಿನಿಯರು

- Advertisement -
- Advertisement -

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬಂಟ್ವಾಳ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯು ಬುರೂಜ್‌ ಇಂಗ್ಲೀಷ್‌ ಮೀಡಿಯಂ ಹೈಸ್ಕೂಲ್‌ ರಝಾನಗರದಲ್ಲಿ ನಡೆದಿದ್ದು, ವಿಟ್ಲದ ಇಬ್ಬರು ವಿದ್ಯಾರ್ಥಿನಿಯರು ಸಾಧನೆಗೈದಿದ್ದಾರೆ.

ಈ ಪಂದ್ಯಾಟದಲ್ಲಿ ಪ್ರಾಥಮಿಕ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಮಾದರಿ ಶಾಲೆಯ ವಿದ್ಯಾರ್ಥಿನಿ ತ್ರಿಷಾ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ದ್ವಿತೀಯ ಸ್ಥಾನವನ್ನು ಸೈಂಟ್ ರೀಟಾ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ ವಿದ್ಯಾರ್ಥಿನಿ ಮೌಶ್ವಿ ಶೆಟ್ಟಿ ಪಡೆದುಕೊಂಡಿದ್ದಾರೆ.

ಪ್ರಶಸ್ತಿ ಗಳಿಸಿಗೊಂಡ ವಿದ್ಯಾರ್ಥಿನಿಯರು ಮಾಧವ ಅಳಿಕೆ ಅವರ ಕರಾಟೆ ತರಗತಿಯ ವಿದ್ಯಾರ್ಥಿಗಳು.

- Advertisement -

Related news

error: Content is protected !!