Sunday, July 6, 2025
spot_imgspot_img
spot_imgspot_img

‘ತ್ರಿವಳಿ ತಲಾಖ್ ರದ್ದಾಗಿರುವುದು ಮುಸ್ಲಿಂ ಸಹೋದರಿಯರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಿದೆ’-ಪ್ರಧಾನಿ ಮೋದಿ

- Advertisement -
- Advertisement -

ಕೇಂದ್ರ ಸರ್ಕಾರದ ಹಲವು ಯೋಜನೆಯ ಪ್ರಯೋಜನವನ್ನು ಜನರು ಪಡೆದುಕೊಂಡಿದ್ದಾರೆ, ಅದರಲ್ಲೂ ಮುಸ್ಲಿಂ ಸಹೋದರಿಯರಿಗೆ ತ್ರಿವಳಿ ತಲಾಖ್ ರದ್ದು ಮಾಡಿರುವುದು ದೊಡ್ಡ ಪ್ರಮಾಣದಲ್ಲಿ ನೆರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಮುಸ್ಲಿಂ ಕುಟುಂಬದ ಸದಸ್ಯನಾಗದಿದ್ದರೂ ಮುಸ್ಲಿಂ ಮಹಿಳೆಯರಂತೆ ನೋವು ಅನುಭವಿಸಿದ್ದೇವೆ, ಆದರೆ ಈಗ ತ್ರಿವಳಿ ತಲಾಖ್‌ ರದ್ದಾಗಿರುವುದರಿಂದ ಮಹಿಳೆಯರಿಗೆ ಮಾತ್ರ ಅಲ್ಲ, ಅವರ ತಂದೆ, ಸಹೋದರರಿಗೂ ಮಾನಸಿಕ ಶಾಂತಿ ಒದಗಿಸದೆ ಎಂದು ಹೇಳಿದರು.

vtv vitla
vtv vitla

ಇನ್ನು ಉತ್ತರ ಪ್ರದೇಶದಲ್ಲಿ ಈ ಹಿಂದೆ ಮೂಲಸೌಕರ್ಯ ಸಮಸ್ಯೆ ಯಥೇಚ್ಚವಾಗಿದ್ದು, ಆದರೆ ಈಗ ಅಭಿವೃದ್ಧಿಯ ವಾತಾವರಣ ಸೃಷ್ಟಿಸಿದ್ದೆ ಎಂದು ಹೇಳಿದರು.

ಕುಟುಂಬ ರಾಜಕಾರಣ ಮಾಡುವ ಪಕ್ಷಕ್ಕೆ ಬಡವರು ಮೂಲಸೌಕರ್ಯ ಪಡೆಯುವುದು ಬೇಡ, ಬದಲಿಗೆ ಅವರ ಒಳಿತಿಗಾಗಿ ಜನರನ್ನು ಬಳಸಿಕೊಳ್ಳುತ್ತಾ ಶ್ರೀಮಂತರಾಗುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭಿವೃದ್ಧಿ ಕಾರ್ಯಗಳು ಅಭೂತಪೂರ್ವಕವಾಗಿ ಮಾಡಿಕೊಂಡು ಬಂದಿದ್ದು, ಈ ನಿಟ್ಟಿನಲ್ಲಿ ಇಲ್ಲಿ ಯಾರಾದರೂ ಸರ್ಕಾರ ರಚಿಸಿ ಆಡಳಿತ ಮಾಡಬಲ್ಲರು ಎಂದಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ, ಹಾಗೇ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾಥ್ ಮಾತ್ರ ಸೂಕ್ತ ಎಂದು ಅವರು ಹೇಳಿದರು.

- Advertisement -

Related news

error: Content is protected !!