Wednesday, July 2, 2025
spot_imgspot_img
spot_imgspot_img

‘ಥ್ಯಾಂಕ್ಯೂ ಗುಜರಾತ್’; ಪ್ರಧಾನಿ ಮೋದಿ ಟ್ವೀಟ್

- Advertisement -
- Advertisement -

ನವದೆಹಲಿ: ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಮತದೊಂದಿಗೆ ಬಿಜೆಪಿ ಜಯಗಳಿಸಿದ ಬಳಿ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಧನ್ಯವಾದ ಗುಜರಾತ್. ಗುಜರಾತ್‌ನ ಜನಶಕ್ತಿಗೆ ನನ್ನ ನಮನಗಳು ಎಂದು ತಿಳಿಸಿದ್ದಾರೆ.

ಅಭಿವೃದ್ದಿ ರಾಜಕೀಯಕ್ಕೆ ಗುಜರಾತ್‌ನ ಜನ ಆಶೀರ್ವಾದ ಮಾಡಿದ್ದಾರೆ. ಇದೇ ವೇಳೆ ನಾವು ವೇಗವಾಗಿ ಅಭಿವೃದ್ದಿ ಪಥದಲ್ಲಿ ಸಾಗಬೇಕೆಂಬ ಆಕಾಂಕ್ಷೆಯೂ ಜನರದ್ದಾಗಿದೆ. ಗುಜರಾತ್‌ನ ಜನ ನೀಡಿರುವ ಈ ತೀರ್ಪಿಗೆ ನಾನು ತಲೆ ಬಾಗುತ್ತೇನೆ ಎಂದಿದ್ದಾರೆ.

ಇನ್ನು ಹಿಮಾಚಲ ಪ್ರದೇಶದ ಜನರ ಪ್ರೀತಿ ಮತ್ತು ಬೆಂಬಲಕ್ಕೂ ಕೃತಜ್ಞತೆಗಳು. ರಾಜ್ಯದ ಆಕಾಂಕ್ಷೆ ಈಡೇರಿಕೆಗೆ ಮತ್ತು ಜನರ ಸಮಸ್ಯೆ ಬಗೆಹರಿಸಲು ನಾವು ಬದ್ದ. ಈ ನಿಟ್ಟಿನಲ್ಲಿ ಎಂದೆಂದಿಗೂ ಕೆಲಸ ಮಾಡುತ್ತೇವೆ ಎಂದು ಮೋದಿ ಹೇಳಿದ್ದಾರೆ.

- Advertisement -

Related news

error: Content is protected !!