Monday, June 15, 2026
spot_imgspot_img
spot_imgspot_img

ದತ್ತಪೀಠದಲ್ಲಿ ನ.07ರಿಂದ 13ರವರೆಗೆ ದತ್ತಮಾಲಾ ಅಭಿಯಾನ

- Advertisement -
- Advertisement -

ಚಿಕ್ಕಮಗಳೂರು: ದತ್ತಪೀಠದಲ್ಲಿ ನವೆಂಬರ್ 7ರಿಂದ 13ರವರೆಗೆ ದತ್ತಮಾಲಾ ಅಭಿಯಾನ ನಡೆಯಲಿರುವುದರಿಂದ ಈ ಹಿನ್ನೆಲೆ ಬ್ಯಾನರ್, ಬಂಟಿಂಗ್ಸ್‌ಗಳನ್ನು ಅಳವಡಿಸುವಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಹೇಳಿದ್ದಾರೆ.

ದತ್ತಮಾಲಾ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ನ.10ರಂದು ನಡೆಯುವ ದತ್ತ ದೀಪೋತ್ಸವ ಹಾಗೂ 13ರಂದು ನಡೆಯುವ ಮೆರವಣಿಗೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ. ಕುಡಿಯುವ ನೀರು, ಪಾರ್ಕಿಂಗ್‌ ಮತ್ತು ಸ್ವಚ್ಛತಾ ಕಾರ್ಯ ಮಾಡಲಾಗುವುದು ಎಂದರು.

ಈ ದತ್ತಮಾಲಾ ಅಭಿಯಾನದಲ್ಲಿ 8ಸಾವಿರ ಭಕ್ತರು ಭಾಗವಹಿಸುವ ಆಗಮಿಸಲಿದ್ದು 11.30ಕ್ಕೆ ದತ್ತಪೀಠದ ಪಾದುಕೆ ದರ್ಶನಕ್ಕೆ ತೆರಳಲಾಗುತ್ತದೆ ಎಂದು ತಿಳಿಸಲಾಗಿದೆ.

- Advertisement -

Related news

error: Content is protected !!