Friday, June 5, 2026
spot_imgspot_img
spot_imgspot_img

ದಯಾ ಕ್ರಿಯೇಷನ್‌ನ 2 ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ “DAYA melodies musical -2023” ಕಾರ್ಯಕ್ರಮ

- Advertisement -
- Advertisement -
vtv vitla

ಸತ್ಯನಾರಾಯಣ ಪೂಜೆ, ಸಭಾ, ಸಾಂಸ್ಕೃತಿಕ, ಅಭಿನಂದನಾ ಕಾರ್ಯಕ್ರಮ

ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಶುಭಾಶೀರ್ವಾದದಲ್ಲಿ ದಯಾ ಕ್ರಿಯೇಷನ್ ಇದರ ಎರಡನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ “DAYA melodies musical -2023” ಕಾರ್ಯಕ್ರಮ 08/01/2023 ನೇ ಆದಿತ್ಯವಾರ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ಸತ್ಯ ನಾರಾಯಣ ಪೂಜೆ, ಮಧ್ಯಾಹ್ನ.12-30 ಕ್ಕೆ ಶ್ರೀ ದೇವಿಗೆ ಮಹಾ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ನಂತರ ಸಭಾ ಕಾರ್ಯಕ್ರಮ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಶ್ರೀಮತಿ ವನಿತಾ ತಾರಿದಾಳ, ಅಧ್ಯಕ್ಷರು ಗ್ರಾಮ ಪಂಚಾಯತ್ ಮಾಣಿಲ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಶ್ರೀ ಕ್ಷೇತ್ರ ಕುಕ್ಕಾಜೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕನ್ನಡ ತುಳು ಕವಿ ಸಾಹಿತಿ ವಾಗ್ಮಿ ವಿಮರ್ಷಕ, ತುಳು ಸಾಹಿತ್ಯ ರತ್ನಜೋಗಿ ಸಾಹಿತ್ಯ ಶ್ರೀ ಪುರಸ್ಕೃತ ಕೆ.ಮಹೇಂದ್ರನಾಥ್ ಸಾಲೆತ್ತೂರು, ಆಮಂತ್ರಣ ಪರಿವಾರ ವಿಜಯ ಕುಮಾರ್ ಜೈನ್ ಅಳದಂಡಿ, ನಮ್ಮ ಕುಡ್ಲ ವಾಹಿನಿಯ ಖ್ಯಾತ ನ್ಯೂಸ್ ರೀಡರ್ ಡಾ. ಪ್ರಿಯಾ ಹರೀಶ್, ಕಾಂತಾರ ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್, ಶ್ರೀಧರ್ ಬಾಳೆಕಲ್ಲು ಕಾರ್ಯದರ್ಶಿ ಜೀರ್ಣೋದ್ಧಾರ ಸಮಿತಿ ಶ್ರೀ ಕ್ಷೇತ್ರ ಕುಕ್ಕಾಜೆ, ವಿಟಿವಿ ಮಾಧ್ಯಮ ಸಂಸ್ಥೆಯ ನಿರ್ದೇಶಕ ರಾಮ್‌ದಾಸ್ ಶೆಟ್ಟಿ ವಿಟ್ಲ, ಸಂಕಪ್ಪ ಸುವರ್ಣ ಬಾಡೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಟವಿ9 ವೀಡಿಯೋ ಜರ್ನಲಿಸ್ಟ್ ವಿಲ್ಫ್ರೆಡ್ ಡಿ ಸೋಜ ಇವರನ್ನು ಅಭಿನಂದಿಸಲಾಗುವುದು. ಬಳಿಕ ತಂಡದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ವೈಭವ ನಡೆಯಲಿದೆ.

- Advertisement -

Related news

error: Content is protected !!