Saturday, May 11, 2024
spot_imgspot_img
spot_imgspot_img

ದೀಪಾವಳಿಯ ಸಂದರ್ಭ ಅಪಾರ್ಟ್‌ಮೆಂಟ್‌ನಲ್ಲಿ ರಂಗೋಲಿ ಬಿಡಿಸಿದಬಾರದೆಂದು ವಿರೋಧವೊಡ್ಡಿದ್ದ ಕ್ರಿಶ್ವಿಯನ್‌ ಕುಟುಂಬ

- Advertisement -G L Acharya panikkar
- Advertisement -
vtv vitla

ಅಪಾರ್ಟ್‌ಮೆಂಟ್​​ವೊಂದರಲ್ಲಿ ನೆರೆಹೊರೆಯ ಹಿಂದೂ ಮನೆಯವರು ರಂಗೋಲಿ ಹಾಕಿದಕ್ಕೆ ಕ್ರಿಶ್ಚಿಯನ್ ಕುಟುಂಬವೊಂದು ವಿರೋಧ ವ್ಯಕ್ತಪಡಿಸಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಅಕ್ಟೋಬರ್ 24, ಸೋಮವಾರದಂದು ದೀಪಾವಳಿಯ ಸಂದರ್ಭದಲ್ಲಿ ತಮ್ಮ ಅಪಾರ್ಟ್‌ಮೆಂಟ್​ನಲ್ಲಿರುವ ಹಿಂದೂ ಮನೆಯವರು ರಂಗೋಲಿ ಹಾಕಿದ್ದರೆ ಎಂದು ಕ್ರಿಶ್ಚಿಯನ್ ಕುಟುಂಬವೊಂದು ವಿರೋಧಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಪಾರ್ಟ್‌ಮೆಂಟ್‌ನಲ್ಲಿರುವ ಹಿಂದೂಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ರಿಶ್ಚಿಯನ್ ಕುಟುಂಬದವರು ನಮ್ಮ ಮನೆಯ ಮುಂದೆ ರಂಗೋಲಿ ಹಾಕಿದ್ದಕ್ಕೆ ವಿರೋಧಿಸಿದರು. ಜೊತೆಗೆ ಈ ರಂಗೋಲಿಯನ್ನು ತೆಗೆಯುವಂತೆ ಬೆದರಿಕೆ ಹಾಕಿದ್ದು. ವೈಯಕ್ತಿವಾಗಿ ನಿಂದಿಸಿದ್ದರೆ ಎಂದು ಆರೋಪಿಸಿದ್ದಾರೆ, ಈ ಘಟನೆಯು ಹೈದರಾಬಾದ್ ನ ಚಿಕಪಲ್ಲಿ ಪ್ರದೇಶದ ಗೋಲ್ಕೊಂಡ ಕ್ರಾಸ್ ರಸ್ತೆಯಲ್ಲಿರುವ ಅರ್ಚನಾ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

ಇದೀಗ ಹಿಂದೂ ಸಂಘಟನೆಗಳು ಅರ್ಚನಾ ಅಪಾರ್ಟ್‌ಮೆಂಟ್‌ನಲ್ಲಿ ರಂಗೋಲಿ ಹಾಕಲು ಆಕ್ಷೇಪಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿತು. ಅಪಾರ್ಟ್ಮೆಂಟ್ ಮುಂದೆ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಚಿಕ್ಕಡಪಲ್ಲಿ ಇನ್ಸ್‌ಪೆಕ್ಟರ್ ಎನ್.ಸಂಜಯ್ ಕುಮಾರ್ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ದೀಪಾವಳಿ ಸಂದರ್ಭದಲ್ಲಿ ಹಿಂದೂ ಕುಟುಂಬವು ಮನೆಯ ಮುಂದೆ ರಂಗೋಲಿ ಹಾಕಿದ್ದಾರೆ. ಎದುರಿನ ಫ್ಲಾಟ್‌ನಲ್ಲಿರುವ ಕ್ರಿಶ್ಚಿಯನ್ ನಿವಾಸಿಗಳು ರಂಗೋಲಿಯ ಹಾಕಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದರೆ ಎಂದು ಹೇಳಿದರು.

ರಂಗೋಲಿ ಹಾಕಲು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು. ರಂಗೋಲಿ ಹಾಕಿರುವುದನ್ನು ವಿರೋಧಿಸಿದ ಕುಟುಂಬದ ವಿರುದ್ಧ ಪೊಲೀಸ್ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು 509 (ಮಹಿಳೆಯರ ನಮ್ರತೆಗೆ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!