Saturday, June 28, 2025
spot_imgspot_img
spot_imgspot_img

ದುಡ್ಡು ಕೊಟ್ಟರೆ ಕೂಡಲೇ ಕೆಲಸ; RTO ಕಚೇರಿಯ ಲಾಗಿನ್ ಐಡಿ ಬಳಸಿ ಲಕ್ಷಾಂತರ ಪಂಗನಾಮ.!

- Advertisement -
- Advertisement -

ತುಮಕೂರು: ಇಲ್ಲೊಬ್ಬಳು ಮಹಿಳೆ ತನ್ನ ಖತರ್ನಾಕ್ ಕೈ ಚಳಕ ತೋರಿಸಿದ್ದಾಳೆ. ತನ್ನ ಗಂಡನ ಲ್ಯಾಪ್ ಟಾಪ್ ಹಾಗೂ ಲಾಗಿನ್ ಐಡಿ ಪಡೆದುಕೊಂಡು RTO ಇಲಾಖೆಗೆ ಪಂಗನಾಮ ಹಾಕಿದ್ದು ಈಗ ಈಕೆ ಪೊಲೀಸರ ಅತಿಥಿಯಾಗಿದ್ದಾಳೆ.

ತುಮಕೂರಿನ ಸಿಂಧೂರ ಲಕ್ಷ್ಮೀ ಎಂಬ ಮಹಿಳೆ ತನ್ನ ಗಂಡನ ಲಾಪ್ ಟಾಪ್ ಬಳಸಿ ಆರ್ ಟಿ ಓ ಮಾಡಬೇಕಾದ ಕೆಲಸವನ್ನು ಈಕೆಯೇ ಮಾಡುತ್ತಿದ್ದಳು. ಇದರಿಂದಾಗಿ ಆರ್ ಟಿ ಓ ಇಲಾಖೆಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಮಧುಗಿರಿ RTO ಕಚೇರಿಯ ರಿಜಿಸ್ಟ್ರೇಶನ್ ಪಾಸ್ ವರ್ಡ್ ಪಡೆದು ಬೇಕಾದವರಿಗೆ ಬೇಕಂದಲ್ಲಿ ಗಾಡಿ ರಿಜಿಸ್ಟ್ರೇಷನ್ ಮಾಡಿಕೊಟ್ಟಿದ್ದಾಳೆ. 2019 ರಿಂದ 2020 ರವರೆಗೂ ಲಕ್ಷಾಂತರ ರೂಪಾಯಿಯನ್ನು ವಂಚಿಸಿದ್ದಾಳೆ.

ದುಡ್ಡು ಕೊಟ್ಟರೆ ಸ್ಥಳದಲ್ಲೇ RC ಕಾರ್ಡ್, ಚಾರ್ಸಿ ನಂಬರ್ ಮತ್ತು ಎಫ್ ಸಿ ಸರ್ಟಿಫಿಕೇಟ್ ಕೊಡುತ್ತಿದ್ದಳು. ಬೇಕೆಂದಾಗ ಲಾಗಿನ್ ಆಗಿ ದುಡ್ಡು ನೀಡಿದವರಿಗೆ ರಿಜಿಸ್ಟ್ರೇಷನ್ ಮಾಡಿಕೊಡುತ್ತಿದ್ದಳು. ಬರೋಬ್ಬರಿ 286 ದಾಖಲೆಗಳನ್ನ ತಿದ್ದಿ ತೀಡಿ ಹಣವನ್ನು ನುಂಗಿ ನೀರು ಕುಡಿದಿದ್ದಾಳೆ. ಈ ಸಂಬ0ಧ ತುಮಕೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಖತರ್ನಾಕ್? ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಬಳಿ ಲ್ಯಾಪ್ ಟ್ಯಾಪ್ ಮತ್ತು ಅಕ್ರಮ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!