Friday, April 19, 2024
spot_imgspot_img
spot_imgspot_img

ದೇವರನಾಡಿನಲ್ಲಿ ಸಲಿಂಗಿ ಜೋಡಿಗಳ ನಿಶ್ಚಿತಾರ್ಥ; ಉಂಗುರ ಬದಲಿಸಿದ ಅಧಿಲಾ ನಸ್ರೀನ್ ಮತ್ತು ಫಾತಿಮಾ ನೂರ್ ಜೋಡಿ

- Advertisement -G L Acharya panikkar
- Advertisement -

ಕೇರಳ: ಇತ್ತೀಚಿನ ದಿನಗಳಲ್ಲಿ ಸಲಿಂಗಿ ಜೋಡಿಗಳ ದಾಂಪತ್ಯದ ಕುರಿತ ಬಹಳಷ್ಟು ಘಟನೆಗಳು ನಡೆಯುತ್ತಿರುತ್ತವೆ. ವಿದೇಶದಲ್ಲಿ ಕಾಮನ್ ಎನಿಸಿಕೊಳ್ಳುವ ಪದ್ಧತಿ ಈಗ ಭಾರತದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದೆ. ಭಾರತೀಯರು ಈ ಸಂಸ್ಕೃತಿ ಅನುಸರಿಸುತ್ತಿರುವ ಉದಾಹರಣೆಗಳು ಕಂಡುಬರುತ್ತಿವೆ.

ಕೇರಳದಲ್ಲಿ ಈ ಮೊದಲು ಅಧಿಲಾ ನಸ್ರೀನ್ ಮತ್ತು ಫಾತಿಮಾ ನೂರ್ ಜೋಡಿ ಭಾರೀ ಸದ್ದು ಮಾಡಿತ್ತು. ಇಬ್ಬರು ಯುವತಿಯರು ಪೋಷಕರ ವಿರೋಧವನ್ನೆಲ್ಲ ಧಿಕ್ಕರಿಸಿ ಒಟ್ಟಾಗಿ ಬದುಕಲು ಅವಕಾಶ ಕೋರಿ ಕೋರ್ಟ್ ಮೊರೆ ಹೋಗಿದ್ದರು.ಇಬ್ಬರು ಯುವತಿಯರು ನಮ್ಮನ್ನು ಒಟ್ಟಾಗಿ ಬದುಕಲು ಬಿಟ್ಟುಬಿಡಿ‌ ಎಂದು ಸಾರ್ವಜನಿಕವಾಗಿ ಮನವಿ ಮಾಡಿಕೊಂಡಿದ್ದರು. ಲೆಸ್ಬಿಯನ್ ದಂಪತಿ ಅಧಿಲಾ ನಸ್ರಿನ್ ಮತ್ತು ಫಾತಿಮಾ ನೂರ್‌ ಅವರು ಅಧಿಲಾ ಸಲ್ಲಿಸಿದ ಮನವಿಯನ್ನು ಆಧರಿಸಿ ಕೇರಳ ಹೈಕೋರ್ಟ್ ಮಂಗಳವಾರ ಒಟ್ಟಿಗೆ ವಾಸಿಸಲು ಅನುಮತಿ ನೀಡಿದೆ.

ಈ ಜೋಡಿ ಈಗ ಉಂಗುರ ಬದಲಿಸಿ ಆಭರಣಗಳನ್ನು ಧರಿಸಿ,ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿಕೊಂಡಿದ್ದು,ಇದರ ಪೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.ಇದರ ಜೊತೆಗೆ ಶೀಘ್ರವಾಗಿ ನಾವು ವಿವಾಹವಾಗುವುದಾಗಿ ಹೇಳಿಕೊಂಡಿದ್ದಾರೆ.

ಅಧಿಲಾ ನಸ್ರೀನ್ ಮತ್ತು ಫಾತಿಮಾ ನೂರ್ ಶಾಲಾ ದಿನಗಳಿಂದಲೂ ಸ್ನೇಹಿತೆಯರಾಗಿದ್ದು, ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಇದಕ್ಕೆ ಕುಟುಂಬದ ವಿರೋಧ ಹೆಚ್ಚಾದ ಬೆನ್ನಲ್ಲೇ ಇದೇ ವರ್ಷ ಮೇ ತಿಂಗಳಲ್ಲಿ, ಫಾತಿಮಾ ಮತ್ತು ಅಧಿಲಾ ಇಬ್ಬರೂ ಕೇರಳದ ಕೊಯಿಕ್ಕೊಡ್ ಗೆ ಹೋಗಿ, ಅಲ್ಲಿ ಎಲ್ ಜಿಬಿಟಿಕ್ಯೂ ಸಮುದಾಯದ ಆಶ್ರಯ ಕೇಂದ್ರದಲ್ಲಿ ವಾಸವಾಗಿದ್ದರು. ಆಗಲೂ ಮನೆಯವರು ಬಿಡಲಿಲ್ಲ. ಇದರ ವಿರುದ್ದ ಅಧಿಲಾ ಕೇರಳ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ, ಫಾತಿಮಾ ಬೇಕು, ನಾವು ಇಬ್ಬರೂ ಜತೆಯಾಗಿರಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಳು.

- Advertisement -

Related news

error: Content is protected !!