Sunday, June 7, 2026
spot_imgspot_img
spot_imgspot_img

ದೇವಸ್ಥಾನ ಪೂಜಾರಿಯಿಂದ ಬಾಲಕಿ ಮೇಲೆ ಅತ್ಯಾಚಾರ

- Advertisement -
- Advertisement -

ರಾಯಚೂರು: ತಾಯಿಯ ಜತೆ ದೇವಸ್ಥಾನಕ್ಕೆ ಬಂದಿದ್ದ ಬಾಲಕಿಯ ಮೇಲೆ ಪೂಜಾರಿ ಅತ್ಯಾಚಾರ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ಜಾಲಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ. ಬಾಗೂರು ಬಸವೇಶ್ವರ ದೇವಸ್ಥಾನದ ಪೂಜಾರಿ ಅಯ್ಯಪ್ಪ(54) ಈ ಕೃತ್ಯ ನಡೆಸಿದ್ದಾನೆ.

8 ವರ್ಷದ ಬಾಲಕಿ ತಾಯಿ ಜೊತೆ ದೇವಸ್ಥಾನಕ್ಕೆ ಪೂಜೆಗಾಗಿ ಬಂದಿದ್ದಳು. ವಿಶೇಷ ಪೂಜೆ ಮಾಡಿ ತಾಯಿತ‌ ಕಟ್ಟುವುದಾಗಿ ಹೇಳಿದ್ದ ಅಯ್ಯಪ್ಪ, ಅವರಿಬ್ಬರನ್ನೂ ನಂಬಿಸಿ ದೇವಸ್ಥಾನದಲ್ಲಿ ಉಳಿಸಿಕೊಂಡಿದ್ದ. ರಾತ್ರಿ ಹೊತ್ತು ಬಾಲಕಿ ಮೇಲೆ ಎರಗಿ‌ ಅತ್ಯಾಚಾರ ಮಾಡಿದ್ದಾನೆ. ಮಾರನೇ ದಿನ‌ ತಾಯಿ ಮುಂದೆ ಬಾಲಕಿ ತನ್ನ‌ ಅಳಲು ಹೇಳಿಕೊಂಡಿದ್ದಳು. ಜಾಲಹಳ್ಳಿ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!