Saturday, June 28, 2025
spot_imgspot_img
spot_imgspot_img

ದೇಶದಲ್ಲಿ ಡೀಸೆಲ್ ದರ ಏರಿಕೆ: ಪೆಟ್ರೋಲ್ ಬೆಲೆ ಯಥಾಸ್ಥಿತಿ.!

- Advertisement -
- Advertisement -

ಶತಕದ ಗಡಿ ದಾಟಿದ ಬಳಿಕ ಕಳೆದ 21 ದಿನಗಳಿಂದ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಆಗದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಎಲ್ಲಾ ಮೆಟ್ರೋ ನಗರಗಳಲ್ಲಿ ಡೀಸೆಲ್ ಬೆಲೆ ಮಾತ್ರ ಗಗನಕ್ಕೇರುತ್ತಲೇ ಇದೆ.

ಭಾನುವಾರ ಪ್ರತಿ ಲೀಟರ್ ಮೇಲೆ 23ರಿಂದ 27 ಪೈಸೆವರೆಗೂ ಡೀಸೆಲ್ ದರ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.19ರೂ ಇದೆ. 88.82 ರೂಪಾಯಿ ಇದ್ದ ಡೀಸೆಲ್ ದರ 89.07 ರೂ.ಗೆ ಏರಿಕೆಯಾಗಿದೆ (25 ಪೈಸೆ).

ಇನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 26 ಪೈಸೆ ಏರಿಕೆಯೊಂದಿಗೆ ಲೀಟರ್ ಡೀಸೆಲ್ ಬೆಲೆ 94.53ಕ್ಕೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಡೀಸೆಲ್ ಮೇಲೆ 27 ಪೈಸೆ, ಚೆನ್ನೈನಲ್ಲಿ 23 ಪೈಸೆ ಹಾಗೂ ಕೋಲ್ಕತ್ತಾದಲ್ಲಿ 25 ಪೈಸೆ ಏರಿಕೆಯಾಗಿದೆ.

- Advertisement -

Related news

error: Content is protected !!