Saturday, May 11, 2024
spot_imgspot_img
spot_imgspot_img

ದೈವಗಳಿಂದಲೇ ಮುಸ್ಲಿಂ ವ್ಯಾಪಾರಿಗೆ ಚಾಲನೆ.! ಇದು ಸಾಮರಸ್ಯದ ಸಂದೇಶ.!

- Advertisement -G L Acharya panikkar
- Advertisement -

ಮಂಗಳೂರಿಗೆ ಹೊಂದಿಕೊಂಡಿರುವ ಕೇರಳ ಗಡಿ ಭಾಗವಾದ ಮಂಜೇಶ್ವರದಲ್ಲಿ ನಡೆದ ಸಾಮರಸ್ಯದ ಘಟನೆ. ಮಂಜೇಶ್ವರಕ್ಕೆ ಸಮೀಪದ ಉದ್ಯಾವರದ ಶ್ರೀಅರಸು ಮಂಜಿಷ್ಣಾರ್‌ ಕ್ಷೇತ್ರದಲ್ಲಿ ಮುಸ್ಲಿಂ ವ್ಯಕ್ತಿಯ ಸಂತೆಯಿಂದ ಕ್ಷೇತ್ರದ ದೈವಗಳು ತೆಂಗಿನ ಕಾಯಿ ಹಾಗು ವೀಳ್ಯದೆಲೆ ಖರೀದಿಸಿ ಕ್ಷೇತ್ರದ ಉತ್ಸವಕ್ಕೆ ದಿನನಿಶ್ಚಯ ಮಾಡುವ ಮೂಲಕ ಮುಸ್ಲಿಂರ ವ್ಯಾಪಾರಕ್ಕೆ ನಮ್ಮದೇನು ಅಡಿಯಿಲ್ಲವೆಂಬುವಂತೆ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

ಸುದೀರ್ಘವಾದ ಕೋವಿಡ್ ನ ಬಳಿಕ ವಾಡಿಕೆಯಂತೆ ಈ ವರ್ಷ ಕೂಡಾ ಉದ್ಯಾವರ ಶ್ರೀ ಅರಸು ಕ್ಷೇತ್ರದ ಜಾತ್ರೆಗೆ ದಿನ ನಿಶ್ಚಯ ನಡೆದಿದೆ. ಸಿಂಹಾಸನ ಕಟ್ಟೆಯ ಒಂದು ಭಾಗದಲ್ಲಿ ಉದ್ಯಾವರ ಸಾವಿರ ಜಮಾಅತ್ ಗೊಳವಟ್ಟ ಮುಸಲ್ಮಾನರು ಹಾಗೂ ಇನ್ನೊಂದು ಭಾಗದಲ್ಲಿ ಬ್ರಹ್ಮಸಭೆ ಅಂದರೆ ಕ್ಷೇತ್ರಕ್ಕೆ ಸಂಬಂಧಪಟ್ಟವರು ಕುಳಿತುಕೊಂಡು ಬಳಿಕ ದಿನ ಕಟ್ಟೆಯ ಮುಂಭಾಗದಲ್ಲಿ ಪಾತ್ರಿಗಳ ಆಗಮನದೊಂದಿಗೆ ದಿನ ನಿಶ್ಚಯವನ್ನು ಓದಿ ಹೇಳಲಾಯಿತು.

“ಕುದಿಕಳ” ಎಂಬುದಾಗಿ ಕರೆಯಲ್ಪಡುವ ಈ ಕಾರ್ಯಕ್ರಮದಲ್ಲಿ ಉದ್ಯಾವರ ಜಮಾದಗೊಳವು ಅನುವಂಶೀಯ ಕುಟುಂಬಕ್ಕೊಳಪಟ್ಟಿ, ಮುಸಲ್ಮಾನ ಇಲ್ಲಿ ವೀಳ್ಯದಲೆ ಹಾಗೂ ತೆಂಗಿನ ಕಾಯಿ ಮಾರಾಟ ನಡೆಸಬೇಕಾಗಿದೆ. ಇದರಂತೆ ಸಯದ್ ಎಂಬಾತ ನಡೆಸುತ್ತಿರುವ ವ್ಯಾಪಾರಕ್ಕೆ ಕ್ಷೇತ್ರದ ಅಣ್ಣ ತಮ್ಮ ದೈವಗಳು ಆಗಮಿಸಿ ಸಾಮಾಗ್ರಿ ಖರೀದಿಸಿ ಆಶೀರ್ವಾದವನ್ನು ನೀಡಿದ, ಮಾರಾಟವಾದ ನಾಲ್ಕು, ತೆಂಗಿನಕಾಯಿಗಳ ಪೈಕಿ ಎರಡೆರಡನ್ನು ಅಣ್ಣ ದೈವ ಹಾಗೂ ತಮ್ಮ ದೈವ ಖರೀದಿಸಿ ತೆಂಗಿನಕಾಯಿ ಒಡೆಯುವ ಸ್ಪರ್ಧೆ ಏರ್ಪಟ್ಟಿತ್ತು. ಮುಂದಿನ ವಾರದಲ್ಲಿ ದೈವಗಳ ಸಮುದಾಯದವರ ಸಾವಿರ ಜಮಾಅತ್ ಭೇಟಿ ನಡೆಯಲಿದೆ. ಮೇ ತಿಂಗಳ 9 ರಿಂದ 12 ರ ತನಕ ಕ್ಷೇತ್ರದಲ್ಲಿ ಉತ್ಸವ ನಡೆಯಲಿದೆ.

- Advertisement -

Related news

error: Content is protected !!