Friday, March 29, 2024
spot_imgspot_img
spot_imgspot_img

ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ವತಿಯಿಂದ “ಮಿಗವು” ಕಾರ್ಯಕ್ರಮ; ಸ್ಥಳೀಯ ಪ್ರೈಮರಿ ಮಟ್ಟದ ಮದ್ರಸ ವ್ಯವಸ್ಥೆಗಳ ಬಗ್ಗೆ ಯಾವುದೇ ಗೊಂದಲಗಳಿಲ್ಲ; ಚಿಂತಕ ಯೂಸುಫ್ ಮಾಣಿ.

- Advertisement -G L Acharya panikkar
- Advertisement -

ಮಂಗಳೂರು: ಮದರಸ ಮತ್ತು ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಆಯೋಜಕರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಮದರಸಗಳ ಬಗ್ಗೆ ಇರುವ ಗೊಂದಲವನ್ನು ನಿವಾರಿಸಬೇಕಾಗಿದೆ ಎಂದು ಬೆಂಗಳೂರಿನ ಚಿಂತಕ ಯೂಸುಪ್ ಮಾಣಿ ಅಭಿಪ್ರಾಯಪಟ್ಟರು.

ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ವತಿಯಿಂದ ಮಂಗಳೂರಿನ ಸಮಸ್ತ ಸಭಾ ಭವನದಲ್ಲಿ ಮಂಗಳವಾರ ನಡೆದ “ಮಿಗವು” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮದ್ರಸ ವಿವಾದದ ಬಗ್ಗೆ ಈಗಾಗಲೇ ಅಧಿಕಾರಿಗಳ ಜೊತೆ ಪ್ರಥಮ ಹಂತದ ಮಾತುಕತೆ ನಡೆಸಲಾಗಿದ್ದು, ಲೌಕಿಕ ವಿದ್ಯೆ ನೀಡದೇ ದಿನ ಪೂರ್ತಿ ಕೇವಲ ಧಾರ್ಮಿಕ ಬೋದನೆ ನಡೆಸುವ ಕೇಂದ್ರಗಳ ಬಗ್ಗೆ ಈಗಾಗಲೇ ತ‌ನಿಖೆ ನಡೆಯುತ್ತಿದೆ, ಸ್ಥಳೀಯ ಪ್ರೈಮರಿ ಮಟ್ಟದ ಮದ್ರಸ ವ್ಯವಸ್ಥೆಗಳ ಬಗ್ಗೆ ಯಾವುದೇ ಗೊಂದಲಗಳಿಲ್ಲ ಎಂದರು.

ದೇಶದಲ್ಲಿ ಕಾರ್ಯಚರಿಸುತ್ತಿರುವ ಮದ್ರಸಗಳ ವಿರುದ್ಧ ವ್ಯಾಪಕ ಅಪಪ್ರಚಾರ ನಡೆಸಲಾಗುತ್ತಿದ್ದು ಈ ಬಗ್ಗೆ ಜನತೆಗೆ ನೈಜಾಂಶವನ್ನು ತಿಳಿಸಬೇಕಾಗಿದೆ. ಕಾಲದ ಬೇಡಿಕೆಗೆ ತಕ್ಕಂತೆ ಸಮಸ್ತದ ಅಧೀನದ ಇಸ್ಲಾಮಿಕ್ ಮತ ವಿದ್ಯಾಬ್ಯಾಸ ಬೋರ್ಡ್ ಮದ್ರಸ ಪಠ್ಯ ಪುಸ್ತಕಗಳನ್ನ ಪರಿಷ್ಕರಿಸುತ್ತಲೇ ಬಂದಿದೆ ಎಂದು ಎಸ್.ಬಿ. ದಾರಿಮಿ ಉಪ್ಪಿನಂಗಡಿ ಅಭಿಪ್ರಾಯಪಟ್ಟರು.

ಹೈಕೋರ್ಟ್ ವಕೀಲ ಲತೀಫ್ ಪುತ್ತೂರು ಮತನಾಡಿ ಇಲ್ಲಿನ ಮದ್ರಸಗಳು ಎಲ್ಲರಿಗೂ ನೋಡುವಂತೆ ಮುಕ್ತವಾಗಿದ್ದು ಪಠ್ಯ ಎಲ್ಲರಿಗೂ ಅರ್ಥವಾಗುವ ರೂಪದಲ್ಲಿದೆ, ಕೆಲವು ವರ್ಷಗಳ ಹಿಂದೆ ಮದ್ರಸ ಪಠ್ಯ ಪುಸ್ತಕದ ಬಗ್ಗೆ ವಿವಾದ ಉಂಟಾದಾಗ ಸಮಸ್ತದ ಮದ್ರಸ ಪುಸ್ತಕಗಳನ್ನು ಮುಂದಿಟ್ಟು ಅದರಲ್ಲಿ ಕಲಿಸಾಗುವ ದೇಶ ಪ್ರೇಮ ಮತ್ತು ಮಾನವೀಯ ಕಾಳಜಿಯ ಬಗ್ಗೆ ನ್ಯಾಯಾಲಕ್ಕೆ ಮನದಟ್ಟು ಮಾಡಿಕೊಡಲು ಸಾಧ್ಯವಾಗಿದೆ ಎಂದರು.

ಹಿರಿಯ ವಕೀಲ ಸುಲೈಮಾನ್ ಸುರಿಬೈಲು ಮಾತನಾಡಿ ಮದ್ರಸ ದ ಇತಿಹಾಸ ಪರಂಪರೆಯನ್ನು ವಿವರವಾಗಿ ತಿಳಿಸಿ ಇದರ ವಿರುದ್ದ ಬರುವ ಆಪಪ್ರಚಾರಗಳನ್ನು ಒಗ್ಗಟ್ಟಿನಿಂದ ಎದರಿಸುವ ಅಗತ್ಯ ಇದೆ ಎಂದರು.

ಪುತ್ತೂರಿನ ವಕೀಲ ಸಿದ್ದೀಖ್ ಮಾತನಾಡಿ ಧಾರ್ಮಿಕ ಕೇಂದ್ರಗಳ ವಿರುದ್ದ ನಡೆಸಲಾಗುತ್ತಿರುವ ಷಡ್ಯಂತ್ರದ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದರು.

ಜಿಲ್ಲಾ ಮದ್ರಸ ಮ್ಯಾನೆಜ್‌ಮೆಂಟ್‌ ಅಧ್ಯಕ್ಷ ಐ.ಮೊಹಿದಿನಬ್ಬ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ‘ಸಮಸ್ತ’ ದ ಮದ್ರಸ ಮ್ಯಾನೆಜ್‌ಮೆಂಟ್‌ ನ ಪ್ರತಿನಿಧಿ ಇಬ್ನು ಅದಂ‌ ಕಣ್ಣೂರು ಮತ್ತು ಮೊಹಿದ್ದೀನ್ ಕಾಳಂಪಾಡಿ ‘ಮಿಗವ್ – 2022’ ತರಗತಿ ನಡೆಸಿ ಕೊಟ್ಟರು. ಮೆಟ್ರೋ ಸಾಹುಲ್ ಹಮೀದ್ ಹಾಜಿ, ಮುಪತ್ತಿಸ್ ಹನೀಫ್ ಮುಸ್ಲಿಯಾರ್, ಸ್ಥಳೀಯ ಖತೀಬ್ ಅಬುಲ್ ಅಕ್ರಂ, ಸಯ್ಯದ್ ಭಾಷಾ ತಂಙಲ್, ಇಬ್ರಾಹಿಂ ದಾರಿಮಿ ಕಡಬ ಮೊದಲಾದವರು ಉಪಸ್ಥಿತರಿದ್ದರು.

ಮಾಜಿ ಮೇಯರ್ ಅಶ್ರಪ್ ಮಾತನಾಡಿ ನಮ್ಮ ಧಾರ್ಮಿಕ ಬಾವನೆಗಳಿಗೆ ದಕ್ಕೆಯಾದರೆ ಅದರ ವಿರುದ್ಧ ಒಗ್ಗಟ್ಟಿನ ಹೋರಾಟದ ಅಗತ್ಯವಿದೆ ಎಂದರು.

ದ.ಕ.ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಲೆ, ಮುಫತ್ತಿಷರುಗಳಾದ ಅಬ್ದುಲ್ಲಾ ಫೈಝಿ, ಉಮ್ಮರ್ ದಾರಿಮಿ ಸಾಲ್ಮರ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಹನೀಫ್ ಹಾಜಿ ಮಂಗಳೂರು ಮೊದಲಾದವರು ಸಮಾರಂಭದಲ್ಲಿ ಮಾತನಾಡಿದರು.

ಜಿಲ್ಲಾ ಮದ್ರಸ ಮ್ಯಾನೆಜ್‌ಮೆಂಟ್‌ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ನೇರಳಕಟ್ಟೆ ಸ್ವಾಗತಿಸಿ. ಇಬ್ರಾಹಿಂ ಕೋಣಾಜೆ ವಂದಿಸಿದರು. ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!