Sunday, April 28, 2024
spot_imgspot_img
spot_imgspot_img

ನಟಿಗೆ ಖಾಸಗಿ ಅಂಗ ಪ್ರದರ್ಶನಗೈದ ಯುವಕ ಜೈಲಿನಿಂದ ಬಿಡುಗಡೆ..! ಬಿಡುಗಡೆಗೊಂಡ ಸವಾದ್‌ಗೆ ಅದ್ಧೂರಿ ಸ್ವಾಗತ

- Advertisement -G L Acharya panikkar
- Advertisement -

ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. KSRTC (ಕೇರಳ) ಬಸ್ಸಿನಲ್ಲಿ ಯುವತಿಯೊಬ್ಬಳು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಯುವಕನ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಯುವತಿ ಗಲಭೆ ಎಬ್ಬಿಸಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಯುವಕನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕನನ್ನು ಬಯಲಿಗೆಳೆದ ಪ್ರಕರಣದಲ್ಲಿ ಜಾಮೀನು ಪಡೆದಿರುವ ಕೋಝಿಕ್ಕೋಡ್‌ನ ಕಾಯಕೋಡಿ ಗ್ರಾಮ ಪಂಚಾಯಿತ್ ವ್ಯಾಪ್ತಿ ಸವಾದ್ (27) ಎಂಬಾತ ಈಗ ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾನೆ. ಈ ಪ್ರಕರಣ ಪುರುಷರ ಮೇಲಿ ದೌರ್ಜನ್ಯ ಎಂಬ ಮಾತುಗಳು ಕೇಳಿಬಂದಿದ್ದು ಯುವತಿಯ ಅಸಲಿ ಮುಖವಾಡವನ್ನು ಬಿಚ್ಚಿಡಲು All Kerala MEN’S Association ಪಣ ತೊಟ್ಟಿದ್ದಾಗಿ ಹೇಳಿಕೊಂಡಿದೆ.

ಜೈಲಿನಿಂದ ಬಿಡುಗಡೆಗೊಂಡಿರುವ ಸವದ್ ಗೆ All Kerala MEN’S Association ಭವ್ಯ ಸ್ವಾಗತ ಕೋರಿದೆ. ಪುರುಷರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ನೇತೃತ್ವದಲ್ಲಿ ಆಲುವಾ ಜೈಲಿನಿಂದ ಬಿಡುಗಡೆಗೊಂಡ ಸವದ್ ಅವರನ್ನು ಸ್ವಾಗತಿಸಲಾಗಿದೆ.

ಘಟನೆಯ ಬಗ್ಗೆ ಮಾತನಾಡಿರುವ ಅಜಿತ್ ಕುಮಾರ್, ಎರನಮ್ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಸವಾದ್‌ಗೆ ಷರತ್ತುಗಳೊಂದಿಗೆ ಜಾಮೀನು ನೀಡಿದೆ. ಅವರನ್ನು ಸ್ವಾಗತಿಸಿ ‘ನಾವೆಲ್ಲರೂ ಒಟ್ಟಿಗೆ ಇದ್ದೇವೆ’ ಎಂದು ಧೈರ್ಯ ಹೇಳಿದ್ದೇವೆ. ಮೊದಲಿಗೆ ಸವದ್ ತಪ್ಪು ಮಾಡಿದ್ದಾನೆ ಎಂದು ಭಾವಿಸಲಾಗಿತ್ತು ಆದರೆ ಯುವತಿಯ ವಿಡಿಯೋ ನೋಡಿ ಯುವಕ ತಪ್ಪು ಮಾಡಿಲ್ಲ ಎಂದು ಮನಗಂಡು ಬೆಂಬಲಕ್ಕೆ ಬಂದಿದ್ದೇವೆ ಎಂದಿದ್ದಾರೆ.

ಇದರ ಲೈವ್ ವಿಡಿಯೋವನ್ನು ಸಂಘದ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗಿದೆ. ಸವಾದ್ ಅವರನ್ನು ಅಜಿತ್ ಕುಮಾರ್ ನೇತೃತ್ವದಲ್ಲಿ ಹೂವಿನ ಹಾರ ಹಾಕಿ ಸ್ವಾಗತಿಸುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು.

ಘಟನೆಯ ವಿವರ: ಆಗಿದ್ದೇನು?
ಈ ಘಟನೆ ಮೇ 16ರ ಮಂಗಳವಾರ ನಡೆದಿತ್ತು. ನಟಿ ಹಾಗೂ ಮಾಡೆಲ್​ ಆಗಿರುವ ನಂದಿತಾ ಶಂಕರ ಅವರು ಇನ್​ಸ್ಟಾಗ್ರಾಂನಲ್ಲಿ ಘಟನೆಯನ್ನು ವಿವರಿಸಿದ್ದರು. ಅವರು ಹೇಳುವ ಪ್ರಕಾರ ಸಿನಿಮಾ ಶೂಟಿಂಗ್​ಗಾಗಿ ಎರ್ನಾಕುಲಂಗೆ ತೆರಳುತ್ತಿದ್ದರಂತೆ. ಈ ವೇಳೆ ಅಂಗಮಾಲಿ ಬಳಿ ಕೊಯಿಕ್ಕೋಡ್​ ಮೂಲದ ಆರೋಪಿ ಸಾವದ್​ ಬಸ್ಸನ್ನು ಏರಿದ್ದ. ಬಳಿಕ ಆತ ಇಬ್ಬರು ಮಹಿಳೆಯರು ಮಧ್ಯೆ ಬಂದು ಕುಳಿತುಕೊಂಡನಂತೆ. ಆ ಇಬ್ಬರು ಮಹಿಳೆಯರಲ್ಲಿ ನಂದಿತಾ ಕೂಡ ಒಬ್ಬರು. ಬಸ್​ ಹೊರಡಲು ಆರಂಭಿಸಿದಾಗ ನಂದಿತಾ ಅವರನ್ನು ಸ್ಪರ್ಶಿಸಲು ಆರಂಭಿಸಿದ್ದಾನಂತೆ.

ನಾನು ಕಿಟಕಿ ಪಕ್ಕದಲ್ಲಿ ಕುಳಿತಿದ್ದೆ. ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದ. ಆತ ಕೇಳಿದ ಎಲ್ಲದಕ್ಕೂ ನಾನು ಉತ್ತರಿಸಿದೆ. ನೋಡಲು ಆತ ಒಳ್ಳೆಯವನಂತೆ ಕಾಣುತ್ತಿದ್ದ. ಬಸ್​ ಕೆಲ ದೂರ ಸಾಗಿದ ಕೂಡಲೇ ಆತನ ಕೈ ನನ್ನ ದೇಹವನ್ನು ಸ್ಪರ್ಶಿಸುತ್ತಿರುವಂತೆ ಭಾಸವಾಯಿತು. ನಾನು ಆತನ ಕಡೆ ನೋಡಿದಾಗ ಆತನ ಒಂದು ಕೈ ಆತನ ಖಾಸಗಿ ಅಂಗದ ಮೇಲಿರುವುದನ್ನು ಗಮನಿಸಿದೆ. ಇದರಿಂದ ನನಗೆ ತೀವ್ರ ಮುಜುಗರವಾಯಿತು. ಬಳಿಕ ಬಸ್​ನ ಕಿಟಕಿ ಗಾಜನ್ನು ಮೇಲಕ್ಕೇರಿಸಿ ಆತನಿಂದ ಅಂತರ ಕಾಯ್ದುಕೊಂಡೆ. ಆದರೂ ತನ್ನ ದುಷ್ಕೃತ್ಯ ಮುಂದುವರಿಸಿದ್ದ. ಮತ್ತೆ ನೋಡುವಷ್ಟರಲ್ಲಿ ತನ್ನ ಪ್ಯಾಂಟ್​ ಜಿಪ್​ ತೆರೆದು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಈ ಕ್ಷಣದಲ್ಲಿ ಏನು ಮಾಡಬೇಕೆಂದು ತೋಚಲಿಲ್ಲ. ಬಳಿಕ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿಕೊಂಡು ಏನು ನಿನ್ನ ಸಮಸ್ಯೆ ಎಂದು ಆತನನ್ನು ಪ್ರಶ್ನೆ ಮಾಡಿದೆ.

ಪ್ರಶ್ನೆ ಕೇಳುತ್ತಿದ್ದಂತೆಯೇ ಆತ ತಕ್ಷಣ ತನ್ನ ಪ್ಯಾಂಟ್​ ಜಿಪ್​ ಅನ್ನು ಹಾಕಿಕೊಂಡನು. ನಾನು ನನ್ನ ಧ್ವನಿಯನ್ನು ಜೋರು ಮಾಡಿದೆ. ಈ ವೇಳೆ ಬಸ್​ ಸಿಬ್ಬಂದಿ ಬಳಿ ಬಂದರು. ನಡೆದ ಘಟನೆಯನ್ನು ಅವರ ಮುಂದೆ ವಿವರಿಸಿದೆ. ದೂರು ನೀಡುತ್ತೀರಾ ಎಂದು ಬಸ್​ ಕಂಡಕ್ಟರ್​ ಪ್ರಶ್ನಿಸಿದರು. ನಾನು ಹೌದು ಎಂದೆ. ಈ ವೇಳೆ ಆರೋಪಿ ತನ್ನ ಪ್ಯಾಂಟ್​ ಜಿಪ್​ ಓಪನ್​ ಆಗಿಲ್ಲ ಎಂದು ವಾದಿಸಿದನು. ಬಸ್​, ವಿಮಾನ ನಿಲ್ದಾಣದ ಹತ್ತಿರ ನಿಲ್ಲುತ್ತಿದ್ದಂತೆ ಹಾಗೂ ಬಸ್​ನ ಬಾಗಿಲು ತೆರೆಯುತ್ತಿದ್ದಂತೆ ಆತ ಓಡಿ ಹೋದ. ಬಳಿಕ ಕಂಡಕ್ಟರ್​ ಮತ್ತು ಡ್ರೈವರ್ ಸ್ಥಳೀಯರ ನೆರವಿನಿಂದ​ ಚೇಸ್​ ಮಾಡಿ ಹಿಡಿದರು ಎಂದು ನಂದಿತಾ ವಿಡಿಯೋದಲ್ಲಿ ವಿವರಿಸಿದ್ದರು.

ಯುವತಿ ಸುಳ್ಳು ದೂರು ದಾಖಲು
ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಪಡೆಯಲು ಯುವತಿ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿ ಆಲ್ ಕೇರಳ ಮೆನ್ಸ್ ಅಸೋಸಿಯೇಷನ್ ​​ರಾಜ್ಯಾಧ್ಯಕ್ಷ ವಟ್ಟಿಯೂರ್ಕಾವ್ ಅಜಿತ್ ಕುಮಾರ್ ಕಳೆದ ದಿನ ಡಿಜಿಪಿಗೆ ದೂರು ಸಲ್ಲಿಸಿದ್ದಾರೆ. ಹುಡುಗಿಯ ಸ್ನೇಹಿತರು ಕೂಡ ಫೋನ್ ಮಾಡಿ ಇದೆಲ್ಲಾ ನಾಟಕ ಎಂದು ಹೇಳುತ್ತಿದ್ದಾರೆ. ದೂರು ದಾಖಲಾದ ನಂತರ ಹಲವು ಬೆದರಿಕೆ ಕರೆಗಳು ಬರುತ್ತಿವೆ ಎಂದು ಅಜಿತ್ ಕುಮಾರ್ ಹೇಳಿದ್ದಾರೆ.

- Advertisement -

Related news

error: Content is protected !!