Saturday, June 28, 2025
spot_imgspot_img
spot_imgspot_img

ನವಜಾತ ಶಿಶುವಿನ ಅಪಹರಣ; ಸಿಸಿಟಿವಿ ದೃಶ್ಯ ಸೆರೆ

- Advertisement -
- Advertisement -
vtv vitla

ಬೆಂಗಳೂರು: ಎಂಟು ದಿನದ ಗಂಡು ಮಗುವನ್ನು ಅಪಹರಿಸಿದ ಘಟನೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮಡೇನೂರು ಗ್ರಾಮದ ನಿವಾಸಿ ಎಂ.ಪಿ. ಪ್ರಸನ್ನ ಎಂಬುವರು ವಿವಿ ಪುರಂ ಪೊಲೀಸರಿಗೆ ದೂರು ನೀಡಿದ್ದಾರೆ. ಏಪ್ರಿಲ್ 6 ರಂದು ಆಸ್ಪತ್ರೆಗೆ ದಾಖಲಾದ ಸುಮಾ ಮರುದಿನವೇ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಆರೋಗ್ಯವಾಗಿದ್ದರೂ ತಾಯಿಯಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆ ಇರುವುದರಿಂದ ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದರು.

ದೂರುದಾರರು ತಮ್ಮ ಊರಿಗೆ ಹಿಂದಿರುಗಿದ್ದರು ಮತ್ತು ಅವರ ಸಂಬಂಧಿ ನಾಗಮ್ಮ ಅವರು ತಾಯಿ ಮತ್ತು ನವಜಾತ ಶಿಶುವಿದ್ದ ವಾರ್ಡ್ ನಂಬರ್ 1ರಲ್ಲಿ ಜತೆಯಲ್ಲಿದ್ದರು. ಶನಿವಾರ ಮುಂಜಾನೆ 4 ಗಂಟೆ ಸುಮಾರಿಗೆ ತಾಯಿ ಮಗುವಿಗೆ ಹಾಲುಣಿಸಿ ನಿದ್ದೆಗೆ ಜಾರಿದ್ರು, ಸುಮಾರು 50 ನಿಮಿಷಗಳ ನಂತರ ಎಚ್ಚರವಾದಾಗ ಮಗು ಕಾಣೆಯಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆಕೆ ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಿಸಿದಾಗ ಮಗು ಸುಳಿವು ಸಿಗಲಿಲ್ಲ. ಮಗುವನ್ನು ಕಿಡ್ನಾಪ್ ಮಾಡುವಾಗ ಸಂಬಂಧಿ ನಾಗಮ್ಮ ಕೂಡ ಮಲಗಿದರು. ನಂತರ ಸುಮಾ ತನ್ನ ಪತಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸ್‌ ದೂರು ದಾಖಲಿಸಲು ನಗರಕ್ಕೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸೀರೆಯುಟ್ಟಿದ್ದ ಮಹಿಳೆಯೊಬ್ಬರು ತನ್ನ ವ್ಯಾನಿಟಿ ಬ್ಯಾಗ್‌ನಲ್ಲಿ ನವಜಾತ ಶಿಶುವನ್ನು ಅಪಹರಿಸಿಕೊಂಡು ಹೋಗಿರುವುದು ಪತ್ತೆಯಾಗಿದೆ. ಶಿಶುವನ್ನು ರಕ್ಷಿಸಲು ಮತ್ತು ಅಪರಾಧಿಯನ್ನು ಹಿಡಿಯಲು ವಿಶೇಷ ತಂಡಗಳನ್ನು ರಚಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!