Wednesday, July 2, 2025
spot_imgspot_img
spot_imgspot_img

ನವೆಂಬರ್ 1 ರಿಂದ ಈ ಸ್ಮಾರ್ಟ್​ಫೋನ್​ಗಳಲ್ಲಿ ಬಂದ್ ಆಗಲಿದೆ ವಾಟ್ಸ್​ಆ್ಯಪ್​!

- Advertisement -
- Advertisement -

ನವೆಂಬರ್ 1 ರಿಂದ ಬಂದ್ ಆಗಲಿರುವ ಆಂಡ್ರಾಯ್ಡ್ ಫೋನ್‌ಗಳ ಪಟ್ಟಿಯನ್ನು ವಾಟ್ಸ್ಆ್ಯಪ್ ಬಿಡುಗಡೆ ಮಾಡಿದೆ. ಅದರಲ್ಲಿ ಸ್ಯಾಮ್‌ಸಂಗ್, ಎಲ್‌ಜಿ, ಝೆಡ್‌ಟಿಇ, ಹುವೈ, ಸೋನಿ, ಅಲ್ಕಾಟೆಲ್ ಮತ್ತು ಇತರ ಕಂಪನಿಗಳ ವಿವಿಧ ಹಳೆಯ ಮಾದರಿಗಳು ಇವೆ.

ನವೆಂಬರ್ 1ರ ಬಳಿಕ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಫೆಸ್​ಬುಕ್ ಒಡೆತನದ ವಾಟ್ಸ್‌ಆ್ಯಪ್ ಸೇವೆ ಸ್ಥಗಿತವಾಗಲಿದೆ. ಈ ಬಗ್ಗೆ ಸ್ವತಃ ವಾಟ್ಸ್‌ಆ್ಯಪ್ ಸಂಸ್ಥೆ ಮಾಹಿತಿ ನೀಡಿದ್ದು, 2011ಕ್ಕೂ ಮೊದಲು ಖರೀದಿಸಿದ ಆ್ಯಂಡ್ರಾಯ್ಡ್ ಆವೃತ್ತಿಯ ಸ್ಮಾರ್ಟ್ ಫೋನ್ ಹಾಗೂ ಐಫೋನ್ ಗಳಲ್ಲಿ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ ಎಂದು ಮಾಹಿತಿ ಹಂಚಿಕೊಂಡಿದೆ.

ಮುಖ್ಯವಾಗಿ ಆಂಡ್ರಾಯ್ಡ್ 4.0.4 ಅಥವಾ ಅದಕ್ಕಿಂತ ಮುಂಚೆ ಇನ್‌ಸ್ಟಾಲ್ ಮಾಡಿದ ಓಎಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ವಾಟ್ಸ್​ಆ್ಯಪ್ ಅನ್ನು ಬೆಂಬಲಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಐಒಎಸ್ 9 ಅಥವಾ ಅದಕ್ಕಿಂತ ಮುಂಚೆ ಇನ್‌ಸ್ಟಾಲ್ ಮಾಡಿದ ಐಫೋನ್‌ಗಳಲ್ಲಿ ಕೂಡ ವಾಟ್ಸ್​ಆ್ಯಪ್ ಸ್ಥಗಿತವಾಗಲಿದೆ.

ಆಂಡ್ರಾಯ್ಡ್ ಫೋನ್‌ಗಳ ಪಟ್ಟಿಯನ್ನು ವಾಟ್ಸ್ಆ್ಯಪ್ ಬಿಡುಗಡೆ ಮಾಡಿದ್ದು, ಅದರಲ್ಲಿ ಸ್ಯಾಮ್‌ಸಂಗ್, ಎಲ್‌ಜಿ, ಝೆಡ್‌ಟಿಇ, ಹುವೈ, ಸೋನಿ, ಅಲ್ಕಾಟೆಲ್ ಮತ್ತು ಇತರ ಕಂಪನಿಗಳ ವಿವಿಧ ಹಳೆಯ ಮಾದರಿಗಳು ಇದ್ದು, ಅವುಗಳಲ್ಲಿ ವಾಟ್ಸ್ಆ್ಯಪ್ ಬೆಂಬಲ ಸ್ಥಗಿತಗೊಳ್ಳಲಿದೆ.

ನಿರ್ವಹಣೆ ಮತ್ತು ಹೆಚ್ಚುವರಿ ಆವೃತ್ತಿ ಅಪ್‌ಡೇಟ್, ಹೊಸ ಫೀಚರ್‌ಗಳಿಗೆ ಬೆಂಬಲ ನೀಡದಿರುವ ಫೋನ್‌ಗಳು ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಾಟ್ಸ್ಆ್ಯಪ್ ಹೊಸ ಫೀಚರ್ ಬಿಡುಗಡೆ ಮಾಡುತ್ತಿದೆ. ಜತೆಗೆ ಹಳೆಯ ಆವೃತ್ತಿಗೆ ಅಪ್‌ಡೇಟ್ ನಿಲ್ಲಿಸುತ್ತಿದೆ.

ನವೆಂಬರ್ 1 ರಿಂದ ಈ ಫೋನ್‌ಗಳಲ್ಲಿ ವಾಟ್ಸ್​ಆ್ಯಪ್ ಸ್ಥಗಿತಗೊಳ್ಳಲಿದೆ:

Apple: ಮೊದಲ ತಲೆಮಾರಿನ ಐಫೋನ್ ಎಸ್ಇ, 6 ಎಸ್ ಮತ್ತು 6 ಎಸ್ ಪ್ಲಸ್ (The first generation iPhone SE, 6s and 6s Plus)

Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್, ಗ್ಯಾಲಕ್ಸಿ ಟ್ರೆಂಡ್ II, ಗ್ಯಾಲಕ್ಸಿ S2, ಗ್ಯಾಲಕ್ಸಿ S3 ಮಿನಿ, ಗ್ಯಾಲಕ್ಸಿ X cover 2, ಗ್ಯಾಲಕ್ಸಿ ಕೋರ್ ಮತ್ತು ಗ್ಯಾಲಕ್ಸಿ ಎಸ್ 2 (Samsung Galaxy Trend Lite, Galaxy Trend II, Galaxy S2, Galaxy S3 mini, Galaxy X cover 2, Galaxy Core and Galaxy Ace 2)

LG: ಎಲ್​​ಜಿ ಲೂಸಿಡ್ 2, ಆಪ್ಟಿಮಸ್ ಎಫ್ 7, ಆಪ್ಟಿಮಸ್ ಎಫ್ 5, ಆಪ್ಟಿಮಸ್ ಎಲ್ 3 II ಡ್ಯುಯಲ್, ಆಪ್ಟಿಮಸ್ ಎಫ್ 5, ಆಪ್ಟಿಮಸ್ ಎಲ್ 5, ಆಪ್ಟಿಮಸ್ ಎಲ್ 5 II, ಆಪ್ಟಿಮಸ್ ಎಲ್ 5 ಡ್ಯುಯಲ್, ಆಪ್ಟಿಮಸ್ ಎಲ್ 3 II, ಆಪ್ಟಿಮಸ್ ಎಲ್ 7, ಆಪ್ಟಿಮಸ್ ಎಲ್ 7 II ಡ್ಯುಯಲ್, ಆಪ್ಟಿಮಸ್ ಎಲ್ 7 II , Optimus L4 II Dual, Optimus F3, Optimus L4 II, Optimus L2 II, Optimus Nitro HD, 4X HD, ಮತ್ತು Optimus F3Q.

( LG Lucid 2, Optimus F7, Optimus F5, Optimus L3 II Dual, Optimus F5, Optimus L5, Optimus L5 II, Optimus L5 Dual, Optimus L3 II, Optimus L7, Optimus L7 II Dual, Optimus L7 II, Optimus F6, Enact, Optimus L4 II Dual, Optimus F3,)

ZTE: ಗ್ರ್ಯಾಂಡ್ S ಫ್ಲೆಕ್ಸ್, ZTE V956, ಗ್ರ್ಯಾಂಡ್ X ಕ್ವಾಡ್ V987 ಮತ್ತು ಗ್ರ್ಯಾಂಡ್ ಮೆಮೊ. (ZTE Grand S Flex, ZTE V956, Grand X Quad V987 and Grand Memo)

Huawei: Huawei Ascend G740, Ascend Mate, Ascend D Quad XL, Ascend D1 Quad XL, Ascend P1 S, Ascend D2.

Sony: ಸೋನಿ ಎಕ್ಸ್ಪೀರಿಯಾ ಮಿರೊ, ಸೋನಿ ಎಕ್ಸ್ಪೀರಿಯಾ ನಿಯೋ ಎಲ್ ಮತ್ತು ಎಕ್ಸ್ಪೀರಿಯಾ ಆರ್ಕ್ ಎಸ್. (Sony Xperia Miro, Sony Xperia Neo L and Xperia Arc S)

ಇತರೆ ಫೋನ್​​ಗಳು: ಅಲ್ಕಾಟೆಲ್ ಒನ್ ಟಚ್ ಇವೊ 7, ಆರ್ಕೋಸ್ 53 ಪ್ಲಾಟಿನಂ, ಹೆಚ್ಟಿಸಿ ಡಿಸೈರ್ 500, ಕ್ಯಾಟರ್ಪಿಲ್ಲರ್ ಕ್ಯಾಟ್ ಬಿ 15, ವಿಕೊ ಸಿಂಕ್ ಫೈವ್, ವಿಕೊ ಡಾರ್ಕ್ ನೈಟ್, ಲೆನೊವೊ ಎ 820, ಯುಮಿ ಎಕ್ಸ್ 2, ಫಯಾ ಎಫ್ 1 ಮತ್ತು ಟಿಎಚ್ ಎಲ್ ಡಬ್ಲ್ಯೂ 8. (Alcatel One Touch Evo 7, Archos 53 Platinum, HTC Desire 500, Caterpillar Cat B15, Wiko Cink Five, Wiko Dark night, Lenovo A820, UMi X2, Faea F1 and THL W8).

- Advertisement -

Related news

error: Content is protected !!