Monday, May 13, 2024
spot_imgspot_img
spot_imgspot_img

ನಾಯಿ ಬೊಗಳಿದ್ದ ಕ್ಕೆ ಆಸ್ಟ್ರೇಲಿಯಾದ ಮಹಿಳೆಯ ಕೊಲೆ; ಭಾರತೀಯ ಮೂಲದ ಆರೋಪಿ ಅರೆಸ್ಟ್‌..!

- Advertisement -G L Acharya panikkar
- Advertisement -

ಆಸ್ಟ್ರೇಲಿಯಾದ ಮಹಿಳೆಯನ್ನು ಕೊಂದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯನ್ನು ಕೊಂದು ಆಸ್ಟ್ರೇಲಿಯಾದಿಂದ ಪರಾರಿಯಾಗಿದ್ದ ರಾಜ್ವಿಂದರ್ ಸಿಂಗ್ ಬಂಧನದ ನಂತರ 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಬಹುಮಾನವನ್ನು ನೀಡುವುದಾಗಿ ಹೇಳಿತ್ತು.

೨೦೧೮ರಲ್ಲಿ 24 ವರ್ಷದ ತೋಯಾ ಕಾರ್ಡಿಂಗ್ಲೆ ಎಂಬಾಕೆಯ ನಾಯಿ ಬೊಗಳಿದ ಕಾರಣ ರಾಜ್ವಿಂದರ್ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. 38 ವರ್ಷದ ರಾಜ್ವಿಂದರ್ ಸಿಂಗ್ ತನ್ನ ಪತ್ನಿಯೊಂದಿಗೆ ಜಗಳವಾಡಿದ ನಂತರ ಕ್ವೀನ್ಸ್‌ಲ್ಯಾಂಡ್‌ನ ವಾಂಗೆಟ್ಟಿ ಬೀಚ್‌ಗೆ ತೆರಳಿದ್ದ ಎನ್ನಲಾಗಿದ್ದು, ತನಿಖೆಯ ಸಮಯದಲ್ಲಿ, ಆತ ತನ್ನೊಂದಿಗೆ ಕೆಲವು ಹಣ್ಣುಗಳು ಮತ್ತು ಅಡುಗೆಮನೆ ಚಾಕುವನ್ನು ತೆಗೆದುಕೊಂಡು ಹೋಗಿದ್ದಾಗಿ ತಿಳಿಸಿದ್ದಾನಂತೆ.

ಕಾರ್ಡಿಂಗ್ಲಿಯ ನಾಯಿ ರಾಜ್ವಿಂದರ್ ಮೇಲೆ ಬೊಗಳಲು ಪ್ರಾರಂಭಿಸಿದಾಗ, ಇಬ್ಬರೂ ಜಗಳವಾಡಿದ್ದಾರೆ. ಈ ವೇಳೆ ರಾಜ್ವಿಂದರ್ ಕಾರ್ಡಿಂಗ್ಲೆ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!