Sunday, June 29, 2025
spot_imgspot_img
spot_imgspot_img

ನಾಲ್ಕು ದಿನ ಮಗಳ ಶವದ ಜೊತೆ ಮಲಗಿದ ಮಾನಸಿಕ ಅಸ್ವಸ್ಥ ತಾಯಿ

- Advertisement -
- Advertisement -

ಮಂಡ್ಯ: ನಾಲ್ಕು ದಿನದ ಹಿಂದೆ ಸಾವನ್ನಪ್ಪಿರುವ ಮಗಳ ಶವದ ಪಕ್ಕದಲ್ಲೇ ತಾಯಿ ಮಲಗಿರುವ ಘಟನೆ ಮಂಡ್ಯ ನಗರದ ಹಾಲಹಳ್ಳಿ ಬಡಾವಣೆಯ ಹೊಸ ತಮಿಳು ಕಾಲೋನಿಯಲ್ಲಿ ಜರುಗಿದೆ.

ಹಾಲಹಳ್ಳಿ ಬಡಾವಣೆಯ ರೂಪ (30) ನಾಲ್ಕು ದಿನಗಳ ಹಿಂದೆ ಮನೆಯಲ್ಲಿಯೇ ಸಾವನ್ನಪ್ಪಿದ್ದು, ಮಗಳ ಶವದ ಮುಂದೆಯೇ ತಾಯಿ ನಾಗಮ್ಮ ಮಲಗಿದ್ದಾರೆ.

ಕಳೆದ 10 ವರ್ಷಗಳ ಹಿಂದೆ ಮದುವೆಯಾಗಿದ್ದ ರೂಪಗೆ ಇಬ್ಬರು ಮಕ್ಕಳು ಸಹ ಇದ್ದರು. ಆದರೆ ಕೌಟುಂಬಿಕ ಕಲಹದಿಂದ 5 ವರ್ಷಗಳ ಹಿಂದೆ ಗಂಡ ಮತ್ತು ಮಕ್ಕಳನ್ನು ಬಿಟ್ಟು ತಾಯಿ ನಾಗಮ್ಮ ಮನೆಯಲ್ಲಿ ವಾಸವಾಗಿದ್ದರು. ಅಲ್ಲದೇ ರೂಪ ಹೋಂ ಗಾರ್ಡ್ ಕೆಲಸಕ್ಕೆ ಸಹ ಮಾಡುತ್ತಿದ್ದರು.

ತಾಯಿ ಮಗಳು ಮಾನಸಿಕ ಖಿನ್ನತೆಗೆ ಒಳಗಾಗಿ ಪ್ರತಿದಿನ ಕುಡಿತಕ್ಕೆ ದಾಸರಾಗಿ ಒಂದಲ್ಲಾ ಒಂದು ವಿಚಾರಕ್ಕೆ ಗಲಾಟೆ ಮಾಡುತ್ತಿದ್ದರು. ಆದರೆ ಕಳೆದ ನಾಲ್ಕು ದಿನಗಳಿಂದ ಇವರ ಮನೆಯಿಂದ ಯಾವುದೇ ಶಬ್ಧ ಕೇಳಿ ಬಂದಿರಲಿಲ್ಲ. ಅಲ್ಲದೇ ಇಡೀ ಬಡಾವಣೆಯಲ್ಲಿ ಕೊಳೆತ ವಾಸನೆ ಬರುತ್ತಿತ್ತು. ಅಕ್ಕ-ಪಕ್ಕದ ಮನೆಯವರು ಇಲಿ ಸತ್ತಿರಬೇಕು ಎಂದು ಅಂದುಕೊಂಡಿದ್ದರು. ಆದರೆ ಸೋಮವಾರ ನಾಗಮ್ಮ ಮನೆಯಿಂದ ನೊಣಗಳು ಹಾರಡುವುದು ಹಾಗೂ ದುರ್ವಾಸನೆ ಬರುವುದು ಕಂಡು ಬಂದಿದೆ.

ನಂತರ ನಾಗಮ್ಮ ಮನೆಯ ಬಾಗಿಲನ್ನು ಹೊಡೆದು ನೋಡಿದಾಗ ರೂಪ ಶವ ಕೊಳೆತ ಸ್ಥಿತಿಯಲ್ಲಿದ್ದು, ಆ ಶವದ ಪಕ್ಕ ತಾಯಿ ನಾಗಮ್ಮ ಕುಳಿತಿರುವ ದೃಶ್ಯಕಂಡ ಜನರು ಬೆಚ್ಚಿ ಬಿದ್ದಿದ್ದಾರೆ. ನಂತರ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ರೂಪ ಸಾವು ಹೇಗೆ ಆಗಿದೆ ಎಂದು ಕಾರಣ ತಿಳಿದು ಬಂದಿಲ್ಲ. ಈ ಕುರಿತು ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
- Advertisement -

Related news

error: Content is protected !!