Thursday, May 16, 2024
spot_imgspot_img
spot_imgspot_img

ನಿರ್ಜಲೀಕರಣ ತಡೆಗೆ ಬೇಸಿಗೆಯಲ್ಲಿ ಈ ಹಣ್ಣುಗಳ ಸೇವನೆಯೇ ಬೆಸ್ಟ್‌

- Advertisement -G L Acharya panikkar
- Advertisement -

ಹೆಚ್ಚಿದ ಬಿಸಿಲು, ಉಷ್ಣಗಾಳಿಯಿಂದ ದೇಹದಲ್ಲಿ ನಿರ್ಜಲೀಕರಣವಾಗುವುದು ಸಾಮಾನ್ಯ. ಈ ಹಣ್ಣುಗಳು ನಿರ್ಜಲೀಕರಣ ತಡೆಗೆ ಸಹಾಯ ಮಾಡುತ್ತವೆ ನೋಡಿ.

ದಿನದಿಂದ ದಿನಕ್ಕೆ ಉಷ್ಣ ಹವೆ ಹೆಚ್ಚುತ್ತಿದೆ. ಬಿಸಿ ಗಾಳಿಗೆ ದೇಹ ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚಾಗಿದೆ. ಇದರ ಜೊತೆಗೆ ಬಿಸಿಲಿನ ಝಳವೂ ಅಧಿಕವಾಗಿರುವುದರಿಂದ ಸುಸ್ತು, ಬಾಯಾರಿಕೆ, ದಣಿವು ಸಾಮಾನ್ಯಾವಾಗಿ ಕಾಡುತ್ತವೆ. ಮುಖ್ಯವಾಗಿ ದೇಹದಲ್ಲಿನ ನೀರಿನ ಸಾಂಧ್ರತೆ ಕಡಿಮೆಯಾಗಿ ನಿರ್ಜಲೀಕರವಾಗುತ್ತಿದೆ. ಅರ್ಧ ಆರೋಗ್ಯ ಸಮಸ್ಯೆಗಳು ಅದರಿಂದಲೇ ಆರಂಭವಾಗುತ್ತದೆ.

ಹೀಗಾಗಿ ಹೆಚ್ಚು ನೀರಿನ ಸೇವನೆ, ನೀರಿನ ಅಂಶವುಳ್ಳ ಹಣ್ಣುಗಳ ಸೇವನೆ ಮಾಡುವುದು ಅಗತ್ಯವಾಗಿದೆ. ಬೇಸಿಗೆಯಲ್ಲಿ ತರಹೇವಾರಿ ಹಣ್ಣುಗಳು ಸಿಗುವ ಕಾರಣ ಅದನ್ನು ಸೇವಿಸಿದರೆ ನಿರ್ಜಲೀಕರಣ ಸಮಸ್ಯೆಯಿಂದ ಪಾರಾಗಬಹುದಾಗಿದೆ. ಹಾಗಾದರೆ ಯಾವೆಲ್ಲಾ ಹಣ್ಣುಗಳು ದೇಹವನ್ನು ನಿರ್ಜಲೀಕರಣವಾಗದಂತೆ ತಡೆಯುತ್ತದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

​ಮಾವಿನ ಹಣ್ಣು

ಈಗ ಮಾವಿನ ಹಣ್ಣುಗಳ ಕಾಲ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ಜಾತಿಯ ಮಾವಿನಹಣ್ಣುಗಳು ಸಿಗುತ್ತವೆ. ಈ ರಸಭರಿತ ಮಾವಿನ ಹಣ್ಣುಗಳ ಸೇವನೆಯಿಂದ ದೇಹದಲ್ಲಿನ ನಿರ್ಜಲೀಕರಣವನ್ನು ಹೋಗಲಾಡಿಸಬಹುದು. ಮಾವಿನ ಹಣ್ಣಿನ ಸೇವನೆಯಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ನೀರಿನ ಅಂಶ ಸಿಗುತ್ತದೆ. ಹೀಗಾಗಿ ನಿರ್ಜಲೀಕರಣ ಸಮಸ್ಯೆಯಿಂದ ದೂರವಿರಬಹುದು.

ಮಾವಿನ ಹಣ್ಣುಗಳ ಜ್ಯೂಸ್‌, ಮಿಲ್ಕ್‌ಶೇಕ್‌ಗಳನ್ನು ಮಾಡಿಕೊಂಡು ಸೇವಿಸಬಹುದಾಗಿದೆ. ಇದು ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ಬೇಸಿಗೆಯಲ್ಲಿ ಮಾವಿನ ಹಣ್ಣು ಉತ್ತಮ ಸ್ನೇಹಿಯಾಗಲು ಸಾಧ್ಯ.

vtv vitla
vtv vitla

​ಪಪ್ಪಾಯ ಹಣ್ಣು

ಪಪ್ಪಾಯ ಅಥವಾ ಪರಂಗಿ ಹಣ್ಣಿನಲ್ಲಿ ವಿಟಮಿನ್‌ ಸಿ ಅಂಶವಿದೆ. ಇದು ಅಪಧಮನಿಗಳಲ್ಲಿ ಸಂಗ್ರಹವಾಗುವ ಕೊಲೆಸ್ಟ್ರಾಲ್‌ ಮಟ್ಟವನ್ನು ತಡೆಯಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಗುಣ ಹೊಂದಿರುವ ಪಪ್ಪಾಯ ಹೆಚ್ಚು ನೀರಿನ ಅಂಶವನ್ನೂ ಹೊಂದಿದೆ. ಹೀಗಾಗಿ ದೇಹ ನಿರ್ಜಲೀಕರಣವಾಗುವುದನ್ನು ಇದು ತಪ್ಪಿಸುತ್ತದೆ.

ಪಪ್ಪಾಯವನ್ನು ಮಧುಮೇಹ ಇರುವವರೂ ಸೇವಿಸಬಹುದಾಗಿದೆ. ಅಲ್ಲದೆ ತೂಕ ಇಳಿಸಿಕೊಳ್ಳಲೂ ಕೂಡ ಇದು ಸಹಾಯ ಮಾಡುತ್ತದೆ.

​ಕಲ್ಲಂಗಡಿ ಹಣ್ಣು

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣುಗಳಿಗೆ ಭಾರೀ ಬೇಡಿಕೆ ಇರುತ್ತದೆ. ಏಕೆಂದರೆ ಕಲ್ಲಂಗಡಿಯಲ್ಲಿ ಹೇರಳವಾದ ನೀರಿನ ಅಂಶವಿದೆ. ಇದರ ಸೇವನೆಯಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಜೊತೆಗೆ ಕಲ್ಲಂಗಡಿ ಬೀಜಗಳು ಕೂಡ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯ ವೃದ್ಧಿಸಲು ಸಹಾಯ ಮಾಡುತ್ತವೆ.

ಅಲ್ಲದೆ ಕ್ಯಾನ್ಸರ್‌ ತಡೆಗಟ್ಟಲು ಕೂಡ ಕಲ್ಲಂಗಡಿ ಹಣ್ಣು ನೆರವಾಗುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಹೆಚ್ಚು ಸೇವಿಸಿ. ಇದು ನಿಮ್ಮ ದೇಹವನ್ನು ಡೆಹೈಡ್ರೇಟ್‌ ಆಗದಂತೆ ನೋಡಿಕೊಳ್ಳುತ್ತದೆ.

​ಕಿತ್ತಳೆ ಹಣ್ಣು

ಸಮೃದ್ಧವಾದ ನೀರಿನ ಅಂಶ ಹೊಂದಿರುವ ಕಿತ್ತಳೆ ಹಣ್ಣುಗಳಲ್ಲಿ ವಿಟಮಿನ್‌ ಸಿ, ಫೈಬರ್‌ ಅಂಶ ಅಡಗಿಕೊಂಡಿದೆ. ಹೀಗಾಗಿ ಇದು ದೇಹದಲ್ಲಿ ನೀರಿನ ಅಂಶದ ಕೊರತೆ ಆಗದಂತೆ ನೋಡಿಕೊಳ್ಳತ್ತದೆ.

ವರ್ಕೌಟ್‌ ಮಾಡುವವರಿಗೆ ಕಿತ್ತಳೆ ಉತ್ತಮ ಆಹಾರವಾಗಿದೆ. ಕಡಿಮೆ ಕೊಲೆಸ್ಟ್ರಾಲ್‌ ಹೊಂದಿರುವ ಈ ಹಣ್ಣು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕಿತ್ತಳೆ ಹಣ್ಣಿನ ಬಳಕೆಯನ್ನು ಮಾಡಿ.

​ಖರ್ಬೂಜ ಹಣ್ಣು

ಸಾಕಷ್ಟು ಪ್ರೋಟೀನ್‌ ಅಂಶಗಳನ್ನು ಹೊಂದಿರುವ ಖರ್ಬೂಜ ಹಣ್ಣು ದೇಹವನ್ನು ನಿರ್ಜಲೀಕರಣವಾಗದಂತೆ ತಡೆಯುತ್ತದೆ. ಖರ್ಬೂಜ ಹಣ್ಣಿನಲ್ಲಿ ನೀರಿನ ಅಂಶವೂ ಚೆನ್ನಾಗಿಯೇ ಇರುತ್ತದೆ. ಅದೂ ಅಲ್ಲದೆ ಸಾಮಾನ್ಯವಾಗಿ ಎಲ್ಲಾ ಸಮಯದಲ್ಲಿಯೂ ಖರ್ಬೂಜ ಹಣ್ಣು ಮಾರುಕಟ್ಟೆಯಲ್ಲಿ ಸಿಗುತ್ತದೆ.

ಖರ್ಬೂಜ ಹಣ್ಣನ್ನು ಜ್ಯೂಸ್‌, ಮಿಲ್ಕ್‌ ಶೇಖ್‌ನಂತಹ ಪಾನೀಯಗಳನ್ನು ಮಾಡಿಕೊಂಡು ಕುಡಿಯಬಹುದಾಗಿದೆ. ಖರ್ಬೂಜ ಸೇವನೆಯಿಂದ ದೇಹದ ತೂಕ ಇಳಿಕೆ, ಅಜೀರ್ಣತೆ, ಮಲಬದ್ಧತೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

vtv vitla
vtv vitla
- Advertisement -

Related news

error: Content is protected !!