Wednesday, July 22, 2026
spot_imgspot_img
spot_imgspot_img

ನೆಲ್ಯಾಡಿ: ಗುಂಡ್ಯದ ಗುಡ್ಡದಲ್ಲಿ ಅನ್ಯಕೋಮಿನ ಜೋಡಿ ಪತ್ತೆ

- Advertisement -
- Advertisement -

ನೆಲ್ಯಾಡಿ: ಪೋಲಿಸ್ ಠಾಣಾ ವ್ಯಾಪ್ತಿಯ ಗುಂಡ್ಯ ಸಮೀಪ ಕಾಡಿನಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕ ಇರುವ ಖಚಿತ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದು, ಅನ್ಯಮತೀಯ ಜೋಡಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಏಪ್ರಿಲ್ 05 ರಂದು ನಡೆದಿದೆ.

ವೇಣೂರು ಮೂಲದ ಯುವತಿ ಹಾಗೂ ಪುತ್ತೂರಿನಲ್ಲಿ ಆಟೋ ಚಾಲಕನಾಗಿರುವ ಮುಸ್ಲಿಂ ಯುವಕ ಇಂದು ಗುಂಡ್ಯಕ್ಕೆ ಜಾಲಿ ಟ್ರಿಪ್ ತೆರಳಿದ್ದು, ಕಾಡಿನ ಮಧ್ಯೆ ನಡೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬಜರಂಗದಳ ಕಾರ್ಯಕರ್ತರು ಎಚ್ಚೆತ್ತು ಜೋಡಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಲೇ ತಮ್ಮ ಸಮುದಾಯದ ಯುವಕನನ್ನು ಬದುಕಿಸುವಲ್ಲಿ ಕೆಲ ರಾಜಕೀಯ ನಾಯಕರು ಪ್ರಯತ್ನ ಪಟ್ಟಿದ್ದಾರೆ ಎನ್ನುವ ಮಾಹಿತಿಯೂ ಹರಿದಾಡಿದೆ.

- Advertisement -

Related news

error: Content is protected !!