Wednesday, July 2, 2025
spot_imgspot_img
spot_imgspot_img

ನೈಟ್ ಕರ್ಫ್ಯೂ ಸಯಮ ಬದಲಾವಣೆಗೆ ಸಿಎಂ ಬೊಮ್ಮಾಯಿಗೆ ಮನವಿ; ಶೀಘ್ರದಲ್ಲೇ 50:50 ನಿಮಯ ರದ್ದು ಸಾಧ್ಯತೆ

- Advertisement -
- Advertisement -
suvarna gold

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅದರ ತೀವ್ರತೆ ಹೆಚ್ಚಾಗಿಲ್ಲ. ಹೀಗಾಗಿ ಜಾರಿಯಾಗಿದ್ದ ವೀಕೆಂಡ್ ಕರ್ಫ್ಯೂನ ಸರ್ಕಾರ ತೆರವುಗೊಳಿಸಿದೆ. ಸದ್ಯ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ಸಮಯ ವಿಸ್ತರಣೆ ಮಾಡುವಂತೆ ಕೆಲ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿವೆ. ರಾತ್ರಿ 11.30 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸುವಂತೆ ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸಲು ವಿವಿಧ ವಲಯಗಳ ಉದ್ಯಮಿಗಳು ನಿರ್ಧರಿಸಿದ್ದಾರೆ. ಮುಂದಿನ ಬುಧವಾರ ಉದ್ಯಮಿಗಳು ಮುಖ್ಯಮಂತ್ರಿಗೆ ಈ ಬಗ್ಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.

ಸದ್ಯ ರಾಜ್ಯದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಇದೆ. ಆದರೆ ಈ ಸಮಯವನ್ನು ಒಂದೂವರೆ ಗಂಟೆ ಮುಂದೂಡಿಕೆ ಮಾಡುವಂತೆ ಹೋಟೆಲ್ ಮಾಲೀಕರ ಸಂಘ, ಬಾರ್, ಪಬ್ ಆ್ಯಂಡ್ ರೆಸ್ಟೊರೆಂಟ್, ಬೇಕರಿ ಆ್ಯಂಡ್ ಕಾಂಡಿಮೆಂಟ್ಸ್ ಸಂಘ, ಮಾಲ್ ಅಸೋಸಿಯೇಷನ್, ಥಿಯೇಟರ್ ಮಾಲೀಕರು, ಬೀದಿ ಬದಿ ವ್ಯಾಪಾರಿಗಳ ಸಂಘ, ಕ್ಯಾಟರಿಂಗ್ ಉದ್ಯಮ ಸಿಎಂಗೆ ಮನವಿ ಮಾಡಲು ನಿರ್ಧರಿಸಿದ್ದಾರೆ.

ಶೀಘ್ರದಲ್ಲೇ 50-50 ರೂಲ್ಸ್ ರದ್ದು? ರಾಜ್ಯದಲ್ಲಿ 50-50 ನಿಯಮ ಜಾರಿಯಲ್ಲಿದೆ. ನಿಯಮ ಜಾರಿಯಲ್ಲಿದ್ದರು ಹೋಟೆಲ್​ನವರು ಪಾಲನೆ ಮಾಡುತ್ತಿಲ್ಲ. ಹೋಟೆಲ್​‘ಗಳಲ್ಲಿ ಯಥಾಸ್ಥಿತಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹೀಗಾಗಿ ಕೇವಲ ಸಭೆ, ಸಮಾರಂಭಗಳಲ್ಲಿ ಅನ್ವಯವಾಗುವಂತೆ 50-50 ನಿಮಯ ಜಾರಿಗೊಳಿಸಿ, ಹೋಟೆಲ್, ಥಿಯೇಟರ್ಗಳಿಗೆ ಈ ನಿಮಯದಿಂದ ಮುಕ್ತಿ ನೀಡುವ ಸಾಧ್ಯತೆಯಿದೆ.

vtv vitla
vtv vitla
- Advertisement -

Related news

error: Content is protected !!