Friday, July 11, 2025
spot_imgspot_img
spot_imgspot_img

ಪಂಜಾಬ್ ಚುನಾವಣೆ; ನಟ ಸೋನುಸೂದ್ ಗೆ ಮತಗಟ್ಟೆಗೆ ಹೋಗದಂತೆ ನಿರ್ಬಂಧ ವಿಧಿಸಿದ ಚುನಾವಣಾ ಆಯೋಗ..!

- Advertisement -
- Advertisement -

ನಟ ಸೋನು ಸೂದ್ ಮೊಗಾದಲ್ಲಿ ಮತದಾನ ಕೇಂದ್ರಗಳಿಗೆ ತೆರಳದಂತೆ ಚುನಾವಣಾ ಆಯೋಗ ನಿರ್ಬಂಧಿಸಿದೆ. ಪಂಜಾಬ್ ವಿಧಾನಸಭೆಗೆ ಭಾನುವಾರ ಒಂದೇ ಹಂತದ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸೋನು ಸೂದ್ ಗೆ ನಿರ್ಬಂಧ ಹೇರಿದೆ.

ಮತಗಟ್ಟೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಸೋನು ಸೂದ್ ಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೇ ಸೋನು ಸೂದ್ ಅವರ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ ಮತ್ತು ಮತಗಟ್ಟೆಗೆ ಹೋಗದಂತೆ ನಟನಿಗೆ ನಿರ್ಬಂಧ ವಿಧಿಸಲಾಗಿದೆ.

ಮತಗಟ್ಟೆ ಹೊರಗಿನ ಕಾಂಗ್ರೆಸ್ ಬೂತ್ ಗಳಿಗೆ ಮಾತ್ರ ಭೇಟಿ ನೀಡಲು ಆಗಮಿಸಿದ್ದೇನೆ ಎಂದು ಸೋನು ಸೂದ್ ಹೇಳಿದ್ದಾರೆ.

vtv vitla
vtv vitla
- Advertisement -

Related news

error: Content is protected !!