Friday, April 19, 2024
spot_imgspot_img
spot_imgspot_img

ಪುತ್ತೂರು: “ಮುತ್ತಿನ ನಗರಿಯ ಹಿಂದು ಹೃದಯ ಸಾಮ್ರಾಟ್” ಡಾ.ಎಂ.ಕೆ.ಪ್ರಸಾದ್‌ ಅಭಿನಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ

- Advertisement -G L Acharya panikkar
- Advertisement -

ಪುತ್ತೂರು: ಡಾ.ಎಂ.ಕೆ.ಪ್ರಸಾದ್‌ ಅಭಿನಂದನಾ ಸಮಿತಿಯಿಂದ ಜು.14ರಂದು ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ನಡೆಯಲಿರುವ ‘ಮುತ್ತಿನ ನಗರಿಯ ಹಿಂದು ಹೃದಯ ಸಾಮ್ರಾಟ್’ ಡಾ.ಎಂ.ಕೆ.ಪ್ರಸಾದ್‌ ಅಭಿವಂದನಾ, ನಾಗರಿಕ ಸನ್ಮಾನ ಕಾರ್ಯಕ್ರಮದ ಪೂರ್ವ ಭಾವಿ ಸಭೆಯು ಜು.9ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.

ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ ಪ್ರತಿಷ್ಠಿತ ಕೆ.ಎಸ್‌.ಇ ಡಾಕ್ಟರ್‍ಸ್‌ ಡೇ ಪ್ರಶಸ್ತಿ ಪುರಸ್ಕೃತರಾದ ಡಾ.ಎಂ.ಕೆ.ಪ್ರಸಾದ್ ಅವರು ಬಡವರ ಪಾಲಿನ ದೇವರು, ಹಿಂದು ಸಮಾಜಕ್ಕೆ ಅವರ ಕೊಡುಗೆ ಅಪಾರ ಇಂತಹ ಸಂದರ್ಭದಲ್ಲಿ ಅವರ ಅಭಿನಂದನಾ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆಯಬೇಕೆಂದು ಸಭೆಯಲ್ಲಿ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಡಾ.ಎಂ.ಕೆ.ಪ್ರಸಾದ್‌ ಅಭಿವಂದನಾ ಸಮಿತಿ ರಚನೆ ಮಾಡಲಾಯಿತು. ಸಮಿತಿ ಅಧ್ಯಕ್ಷರಾಗಿ ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯ, ಸಂಚಾಲಕರಾಗಿ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಮುರಳೀಕೃಷ್ಣ ಹೆಸಂತಡ್ಕ, ಅರುಣ್‌ ಕುಮಾರ್ ಪುತ್ತಿಲ, ಸಂತೋಷ್ ರೈ ಕೈಕಾರ, ನವೀನ್ ರೈ ಪಂಜಳ, ಪ್ರವೀಣ್ ಶೆಟ್ಟಿ ತಿಂಗಳಾಡಿ, ರವಿ ಆಚಾರ್ಯ ಕೃಷ್ಣನಗರ, ದಿನೇಶ್‌ ಮೆದು ಮತ್ತು ಪ್ರಧಾನ ಅಜಿತ್‌ ರೈ ಹೊಸಮನೆ, ಕಾರ್ಯದರ್ಶಿಯಾಗಿ ರಾಜೇಶ್ ರೈ ಪರ್ಪುಂಜ, ಕೋಶಾಧಿಕಾರಿಯಾಗಿ ಚಿನ್ಮಯ್‌ ರೈ ಈಶ್ವರಮಂಗಲ, ಪ್ರಚಾರ ಮತ್ತು ಮಾಧ್ಯಮ ಪ್ರಮುಖ್ ಆಗಿ ರಾಜೇಶ್ ಬನ್ನೂರು ಅವರನ್ನು ಆಯ್ಕೆ ಮಾಡಲಾಯಿತು.

ಕೃಷ್ಣಪ್ರಸಾದ್ ಶೆಟ್ಟಿ, ದಿನೇಶ್ ಪಂಜಿಗ, ಮಹೇಶ್ ಕೇರಿ, ವಿಶ್ವನಾಥ್ ಗೌಡ ಬನ್ನೂರು, ಅಶೋಕ್ ಕುಂಬ್ಳೆ, ಧರೇಶ್‌ ಹೊಳ್ಳ, ರಾಮಚಂದ್ರ ಕಾಮತ್, ಮನ್ಮಥ್ ಶೆಟ್ಟಿ, ಚಂದ್ರಶೇಖರ್, ರಾಜು, ಸುಬ್ರಹ್ಮಣ್ಯ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಕೊಟೇಜಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -

Related news

error: Content is protected !!