Sunday, June 29, 2025
spot_imgspot_img
spot_imgspot_img

“ಪಫರ್” ಹೆಸರಿನ ಮೀನು ಸೇವಿಸಿ ಮಹಿಳೆ ಸಾವು; ಕೋಮಾದಲ್ಲಿ ಆಕೆಯ ಪತಿ

- Advertisement -
- Advertisement -

“ಪಫರ್” ಹೆಸರಿನ ಮೀನು ಸೇವಿಸಿ ಮಹಿಳೆಯೊಬ್ಬರು ಸಾವನಪ್ಪಿದ್ದು, ಆಕೆಯ ಪತಿ ಕೋಮಾ ಸ್ಥಿತಿ ತಲುಪಿದ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಮಲೇಷ್ಯಾದ ಜೋಹೋರ್ ನಿವಾಸಿ ಲಿಮ್ ಸಿವ್ ಗುವಾನ್ (83) ಎಂಬ ಮೃತಪಟ್ಟ ಮಹಿಳೆ.

ವೃದ್ಧ ದಂಪತಿಗಳ ಮಗಳು ಸ್ಥಳೀಯ ಅಂಗಡಿಯಿಂದ ಮೀನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಯವಾಗಲು ಅದೇ ಅಂಗಡಿಯಿಂದ ಮೀನು ಖರೀದಿಸುತ್ತಿರುವುದರಿಂದ ಈ ಬಾರಿ ಮೀನು ಕೊಳ್ಳುವ ವೇಳೆ ಗುಣಮಟ್ಟವನ್ನು ಪರಿಶೀಲಿಸಲಿಲ್ಲ ಎನ್ನಲಾಗಿದೆ.

ಊಟಕ್ಕೆ ಮೀನನ್ನು ಸೇವಿಸಿದ ನಂತರ, ಮಹಿಳೆ ನಡುಗಲು ಮತ್ತು ಉಸಿರಾಟದ ತೊಂದರೆಗಳನ್ನು ಅನುಭವಿಸಲು ಪ್ರಾರಂಭಿಸಿದರು. ಆಕೆಯ ಪತಿಯಲ್ಲಿ ಕೂಡ ಸುಮಾರು ಒಂದು ಗಂಟೆಯ ನಂತರ ಇದೇ ರೀತಿಯ ರೋಗಲಕ್ಷಣಗಳು ಕಂಡುಬಂದವು ಎಂದು ಹೇಳಲಾಗಿದೆ.

ಅ ಸಮಯದಲ್ಲಿ ಅವರ ಮಗ ದಂಪತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಕೋಮಾದಲ್ಲಿರುವ ಆಕೆಯ ಪತಿ ತೀವ್ರ ತೀವ್ರ ನಿಘಾ ಘಟಕ ಆಸ್ಪತ್ರೆಗೆ ಸೇರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!