Friday, July 4, 2025
spot_imgspot_img
spot_imgspot_img

ಪ್ರೀತಿಸಿ ಮದುವೆಯಾಗಿ ನಾಲ್ಕು ತಿಂಗಳಲ್ಲೇ ನೇಣಿಗೆ ಶರಣಾದ ನವವಿವಾಹಿತೆ

- Advertisement -
- Advertisement -

ಬೆಂಗಳೂರು: ನಗರದ ಪುಟ್ಟೇನಹಳ್ಳಿಯ ಮನೆಯೊಂದರಲ್ಲಿ ನವವಿವಾಹಿತೆಯ ಮೃತದೇಹ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ. ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಹಾರಿಕಾ ಸಾವನ್ನಪ್ಪಿದ ಮಹಿಳೆ. ಇವರ ತಂದೆ ನೀಡಿದ‌ ದೂರಿನ ಮೇರೆಗೆ ಪತಿ ಕಾರ್ತಿಕ್ ಹಾಗೂ ಮನೆಯವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಿಎಸ್ಸಿ ಮುಗಿಸಿದ ನಿಹಾರಿಕ ಮದ್ವೆಯಾದ ಬಳಿಕ ಪುಟ್ಟೇನಹಳ್ಳಿಯ ಖಾಸಗಿ ಸ್ಕೂಲ್ ಒಂದರಲ್ಲಿ ಟೀಚಿಂಗ್ ಮಾಡಿಕೊಂಡುತ್ತಿದ್ದರು. ಕಾರ್ತಿಕ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ. ನಿಹಾರಿಕಾ ಹಾಗೂ ಕಾರ್ತಿಕ್ ಐದು ವರ್ಷಗಳಿಂದ‌ ಪ್ರೀತಿಸಿ ಕಳೆದ ಜೂನ್​ನಲ್ಲಿ ಮದುವೆಯಾಗಿದ್ದರು.

ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿಯ ನಡುವೆ ಕಾಲಕ್ರಮೇಣ ಬಿರುಕು ಮೂಡಿತ್ತು ಎನ್ನಲಾಗುತ್ತಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಿಹಾರಿಕಾಗೆ ಕಾರ್ತಿಕ್‌ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ. ಕೆಲದಿನಗಳ ಹಿಂದೆ ಗಂಡನೊಂದಿಗೆ ಜಗಳವಾಗಿ ನಿಹಾರಿಕಾ ತವರು ಮನೆಗೆ ಸೇರಿದ್ದಳು‌. ಹಿರಿಯರ ಸಮ್ಮುಖದಲ್ಲಿ ಬುದ್ದಿ ಹೇಳಿ‌ ಗಂಡನ ಮನೆಗೆ ಕಳುಹಿಸಲಾಗಿತ್ತು. ಇತ್ತೀಚೆಗೆ ಶಾಲೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಮತಿ ವಿಚಾರವಾಗಿ ಮತ್ತೆ ಜಗಳವಾಗಿದೆ. ಇದರಿಂದ ಮನನೊಂದು ಶನಿವಾರ ನಿಹಾರಿಕಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ತಿಳಿಸಿದರು.‌ಈ ಸಂಬಂಧ ನಿಹಾರಿಕಾ ಪೋಷಕರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. 

ಮೃತ ನಿಹಾರಿಕಾ ಆಸೆಯಂತೆ ಆಕೆಯ ಕುಟುಂಬ ನೇತ್ರದಾನ ಮಾಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

- Advertisement -

Related news

error: Content is protected !!