
ಲಾಹೋರ್(ಪಾಕಿಸ್ತಾನ): ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಎಂಟು ವರ್ಷದ ಹಿಂದು ಬಾಲಕನನ್ನು ಹತ್ಯೆಗೈದ ದುಷ್ಕರ್ಮಿಗಳು ಶವದ ಮೇಲೆಯೇ ಅತ್ಯಾಚಾರ ನಡೆಸಿದ್ದಾರೆ. ಬಾಲಕನ ಶವ ಖೈರ್‌ಪುರ್ ಮಿರ್ ಪ್ರದೇಶದ ಬಾಬರ್ಲೋಯ್ ಪಟ್ಟಣದಲ್ಲಿನ ಹಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿದೆ. ಬಾಲಕನ ಶವದ ಮೇಲೆ ಚಿತ್ರಹಿಂಸೆ ನೀಡಿರುವ ಗುರುತುಗಳು ಇವೆ ಎಂದು ಬಾಲಕನ ಸೋದರ ಸಂಬಂಧಿ ರಾಜ್‌ಕುಮಾರ್ ತಿಳಿಸಿದ್ದಾರೆ.

ಬಾಲಕನ ಕುತ್ತಿಗೆ, ಬೆನ್ನು, ಸೊಂಟದಲ್ಲಿ ಪರಚಿರುವ ಗುರುತುಗಳು ಪತ್ತೆಯಾಗಿವೆ. ಬಾಲಕ ಐದನೇ ತರಗತಿ ಓದುತ್ತಿದ್ದ, ಅಪ್ರಾಪ್ತ ಬಾಲಕನ ದೇಹದ ಮೇಲೆ ಚಿತ್ರಹಿಂಸೆ ನೀಡಿರುವ ಗುರುತು ಕಂಡುಬಂದಿವೆ ಎಂದು ಮಕ್ಕಳ ರಕ್ಷಣಾ ಪ್ರಾಧಿಕಾರ ಜುಬೇರ್ ಮಹೇರ್ ಹೇಳಿದ್ದಾರೆ.

ಬಾಲಕನನ್ನು ಕೊಂದು, ಅತ್ಯಾಚಾರವೆಸಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಮುನ್ನ ಕತ್ತು ಕೊಯ್ದು ಹತ್ಯೆ ಮಾಡಿರುವುದಾಗಿ ಬಂಧಿತ ಆರೋಪಿಯೊಬ್ಬ ತಪ್ಪೊಪ್ಪಿಕೊಂಡಿದ್ದಾನೆ.

ಪಾಕಿಸ್ತಾನ ಇದೇ ಮೊದಲ ಬಾರಿಗೆ ಈ ಅತ್ಯಾಚಾರಿಗಳಿಗೆ ಕೆಮಿಕಲ್ ಕ್ಯಾಸ್ಟ್ರೇಶನ್ ಶಿಕ್ಷೆ ವಿಧಿಸಲು ತಯಾರಾಗಿದೆ. ಕೆಮಿಕಲ್ ಕ್ಯಾಸ್ಟ್ರೇಶನ್ ಎನ್ನುವುದು ಲೈಂಗಿಕ ಚಟುವಟಿಕೆ ಕಡಿಮೆ ಮಾಡಲು ಔಷಧಗಳ ಬಳಕೆಯ ಪದ್ಧತಿಯಾಗಿದೆ. ಇತ್ತೀಚೆಗಷ್ಟೇ ಪಾಕ್ ಸಂಸತ್ ಈ ಶಿಕ್ಷೆ ಜಾರಿಗೆ ಸಮ್ಮತಿಸಿದೆ.


