Thursday, April 25, 2024
spot_imgspot_img
spot_imgspot_img

ಪಾಣಾಜೆ: ಆ.01 ಆದಿತ್ಯವಾರದಂದು ಪಾಣಾಜೆ ಗ್ರಾಮ ಪಂಚಾಯತ್‌ನ ವತಿಯಿಂದ ಜಾಂಬ್ರಿ ಗುಹೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

- Advertisement -G L Acharya panikkar
- Advertisement -

ಪಾಣಾಜೆ: ಐತಿಹಾಸಿಕ ಪ್ರವಾಸಿ ತಾಣ. ನೆಟ್ಟಣಿಗೆ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಪವಿತ್ರವಾದ ಸ್ಥಳ ಜಾಂಬ್ರಿ ಗುಹೆ. ಊರ ಪರವೂರ ಬಹಳಷ್ಟು ಜನರು ಅಲ್ಲಿಗೆ ಭೇಟಿ ನೀಡಿ ಒಂದಿಷ್ಟು ಸಂತಸವನ್ನು, ಸಮಾಧಾನವನ್ನು ಹಂಚಿಕೊಂಡು ಮರಳಿ ಮನೆಗೆ ತೆರಳುವಂತಹ ಒಂದು ಪ್ರೇಕ್ಷಣೀಯ ಸ್ಥಳ.

ಇದನ್ನೂ ಓದಿ: ವಿಟ್ಲ: ಸಮೃದ್ಧಿ ಟೆಕ್ಸ್ ಟೈಲ್ಸ್ ಮಳಿಗೆಯಲ್ಲಿ ಇಂದು ಮತ್ತು ನಾಳೆ ವಿಶೇಷ ಮಾನ್ಸೂನ್ ಆಫರ್

ಇದೀಗ ಈ ಸುಂದರ ಪರಿಸರವು ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳಿಂದ ತುಂಬಿಹೋಗಿದ್ದು ಈ ಪರಿಸರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ನ ವತಿಯಿಂದ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಊರ ಸಹೃದಯಿ ಗ್ರಾಮಸ್ಥರ ನೆರವಿನೊಂದಿಗೆ ಸ್ವಚ್ಛತಾ ಕಾರ್ಯಕ್ರಮವನ್ನು ಆಗಸ್ಟ್ 1ರ ಆದಿತ್ಯವಾರ ಬೆಳಿಗ್ಗೆ 7.30 ರಿಂದ ನಡೆಯಲಿದೆ.

ಜಾಂಬ್ರಿ ಗುಹೆಯ ಸುತ್ತಮುತ್ತಲಿನ ಪರಿಸರವನ್ನು ಶ್ರಮದಾನದ ಮೂಲಕ ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿಂದೆಯೂ ಕೆಲವು ಬಾರಿ ಜಾಂಬ್ರಿ ಪರಿಸರವನ್ನು ಸ್ವಚ್ಛಗೊಳಿಸಿದ್ದು, ಊರ ಪ್ರಜ್ಞಾವಂತ ಬಾಂಧವರಾದ ತಮ್ಮೆಲ್ಲರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆದಿರುತ್ತದೆ.

ಇದನ್ನೂ ಓದಿ: ಉಳ್ಳಾಲ: ರಾಷ್ಟ್ರ ಪಕ್ಷಿಯ ಕಳೇಬರ ಪತ್ತೆ; ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಶಂಕೆ!

ಅದರಂತೆ ಈ ಬಾರಿಯೂ ಕೂಡ ಈ ಒಂದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಹಾಗೂ ಪ್ರೀತಿಯಿಂದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮೂರಿನ ಎಲ್ಲ ನಾಗರೀಕರ ಅಚ್ಚುಮೆಚ್ಚಿನ ಸುಂದರ ತಾಣವಾದ ಜಾಂಬ್ರಿ ಗುಹೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವಲ್ಲಿ ನಮ್ಮೊಂದಿಗೆ ಕೈಜೋಡಿಸಿ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!