Saturday, June 29, 2024
spot_imgspot_img
spot_imgspot_img

ಪಾಲ್ತಾಡಿ: ಗುಡ್ಡದಲ್ಲಿ ವ್ಯಕ್ತಿಯ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸಹೋದರ ಸೇರಿ ಇಬ್ಬರ ವಿರುದ್ದ ಪ್ರಕರಣ ದಾಖಲು…!!

- Advertisement -G L Acharya panikkar
- Advertisement -

ಸವಣೂರು: ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು,ಇದೊಂದು ಕೊಲೆಯಾಗಿರುವ ಸಾಧ್ಯತೆ ಇದೆ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಪಾಲ್ತಾಡಿ ಗ್ರಾಮದ ಬೊಳಿಯಾಲ ನಿವಾಸಿ ಸೇಸಪ್ಪ ಪೂಜಾರಿ (76ವ.) ಎಂಬವರ ಮೃತದೇಹ ಪತ್ತೆಯಾಗಿದೆ.ಫೆ.5ರಿಂದ ನಾಪತ್ತೆಯಾಗಿದ್ದಾರೆಂದು ಹೇಳಲಾಗಿರುವ ಸೇಸಪ್ಪ ಪೂಜಾರಿಯವರ ಶವ ಪತ್ತೆಯಾಗಿದೆ. ಸಾವಿನಲ್ಲಿ ಸಂಶಯವಿರುವ ಹಿನ್ನೆಲೆಯಲ್ಲಿ ಸೇಸಪ್ಪ ಪೂಜಾರಿಯವರ ಪುತ್ರಿ ಶುಭವತಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

vtv vitla
vtv vitla

ಸೇಸಪ್ಪ ಪೂಜಾರಿಯವರು ತನ್ನ ತಮ್ಮ ಬಾಲಕೃಷ್ಣ ಪೂಜಾರಿಯವರ ಮನೆಯಲ್ಲಿ ಮೂಳೆ ಮುರೀತಕ್ಕೋಳಗಾಗಿ ವಿಶ್ರಾಂತಿ ಚಿಕಿತ್ಸೆ ಯಲ್ಲಿದ್ದು, ಫೆ.5ರಿಂದ ನಾಪತ್ತೆಯಾಗಿದ್ದು,ಎ.8ರಂದು ಅಪರಾಹ್ನ 3:00 ಗಂಟೆಗೆ ಪಾಲ್ತಾಡಿ ಗ್ರಾಮದ ಬೋಳಿಯಾಲ ಎಂಬಲ್ಲಿ ಗೇರು ನಿಗಮಕ್ಕೆ ಸಂಬಂಧ ಪಟ್ಟ ಗುಡ್ಡ ಜಮೀನಲ್ಲಿ ಸೇಸಪ್ಪ ಪೂಜಾರಿ ಯವರ ಮೃತದೇಹವು ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಶೇಷಪ್ಪ ಪೂಜಾರಿ ಯವರು ನಡೆದಾಡಲು ಅಶಕ್ತರಾಗಿದ್ದು ಮನೆಯಿಂದ ದೂರದ ಗುಡ್ಡ ಪ್ರದೇಶಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಆಕಸ್ಮಿಕವಾಗಿ ಬಿದ್ದು ಮೃತಪಡುವ ಸಾಧ್ಯತೆ ಕಡಿಮೆ ಇದೆ ಎಂದು ಶುಭವತಿ ಅವರು ದೂರು ನೀಡಿದ್ದರು.

ಬಳಿಕ ನಡೆದ ಬೆಳವಣಿಗೆಯಲ್ಲಿ ಮೃತರ ಇನ್ನೋರ್ವ ಪುತ್ರಿ ಪುಷ್ಪಾವತಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿ ತನ್ನ ತಂದೆ ಸೇಸಪ್ಪ ಪೂಜಾರಿ ಅವರನ್ನು ಅವರ ಜಾಗವನ್ನು ಕಬಳಿಸುವ ಹುನ್ನಾರದಲ್ಲಿ ಅಥವಾ ಅವರನ್ನು ಆರೈಕೆ ಮಾಡುವುದನ್ನು ತಪ್ಪಿಸಲು ಕೊಲೆ ಮಾಡಿರುವ ಸಾಧ್ಯತೆ ಇರುವ ಕುರಿತು ದೂರು ನೀಡಿದ್ದರು.

ಇದರಂತೆ ಸೇಸಪ್ಪ ಪೂಜಾರಿ ಅವರ ಸಹೋದರ ಬಾಲಕೃಷ್ಣ ಪೂಜಾರಿ ಹಾಗೂ ಅವರ ಮಗ ವೇಣುಗೋಪಾಲ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

vtv vitla
vtv vitla
- Advertisement -

Related news

error: Content is protected !!