Saturday, September 19, 2026
spot_imgspot_img
spot_imgspot_img

ಪುತ್ತೂರು: ಅನ್ಯಕೋಮಿನ ವ್ಯಕ್ತಿಯೋರ್ವನಿಂದ ರಿಕ್ಷಾ ಚಾಲಕನ ಮೇಲೆ ಹಲ್ಲೆ; ಪ್ರಕರಣ ದಾಖಲು..!

- Advertisement -
- Advertisement -

ಪುತ್ತೂರು: ಅನ್ಯಕೋಮಿನ ವ್ಯಕ್ತಿಯೋರ್ವ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಕೆದಂಬಾಡಿ ಗ್ರಾಮದ ದರ್ಬೆ ಎಂಬಲ್ಲಿ ನಡೆದಿದೆ.

ಗೋಳಿಲ ಅರಿಯಡ್ಕ ನಿವಾಸಿ, ಆಟೋ ಚಾಲಕ ಅನಿಲ್ ಕುಮಾರ್(22) ಹಲ್ಲೆಗೊಳಗಾದವರು.

ಆಟೋ ಚಾಲಕ ಅನಿಲ್ ಕುಮಾರ್ ಎಂಬವರು ಪ್ರಯಾಣಿರೋರ್ವ ರನ್ನು ಕುಳ್ಳಿರಿಸಿಕೊಂಡು ಸಾಗು ಕಡೆಯಿಂದ ತಿಂಗಳಾಡಿ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಹಾರ್ನ್ ಮಾಡಿಕೊಂಡು ಬಂದ ಮಜೀದ್ ಆಟೋ ರಿಕ್ಷಾವನ್ನು ಓವರ್ ಟೇಕ್ ಮಾಡಿ, ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ಕಾರಿನಿಂದ ಇಳಿದು ಆಟೋ ರಿಕ್ಷಾವನ್ನು ನಿಲ್ಲಿಸಿ ಅನಿಲ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಗಾಯಗೊಂಡ ರಿಕ್ಷಾ ಚಾಲಕ ಅನಿಲ್ ಸದ್ಯ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಸಂಪ್ಯ ಠಾಣೆಯಲ್ಲಿ ಐಪಿಸಿ 1860 (U/S 341,504,323) ರಂತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!