Friday, May 3, 2024
spot_imgspot_img
spot_imgspot_img

ಪುತ್ತೂರು : (ಎ.29-ಮೇ.7) ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವೀಕರಣ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ

- Advertisement -G L Acharya panikkar
- Advertisement -
vtv vitla

ಪುತ್ತೂರು : ಬೆಳ್ಳಿಪ್ಪಾಡಿ ಶ್ರೀ ಸಕಲೇಶ್ವರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಎ.29 ರಿಂದ ಮೇ 7ರ ವರೆಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನವೀಕರಣ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ.

ದಿನಾಂಕ 29-04-2023ನೇ ಶನಿವಾರ ಬೆಳಿಗ್ಗೆ 9.30ಕ್ಕೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಊರ ಹಾಗೂ ಪರವೂರ ಭಗವದ್ಭಕ್ತರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅಪರಾಹ್ನ ಗಂಟೆ 3ರಿಂದ 4ರ ವರೆಗೆ ಭಜನಾ ಸೇವೆ-ಶ್ರೀ ಶಾರದಾ ವನಿತಾ ಭಜನಾ ಮಂಡಳಿ, ರಾಮನಗರ ಉಪ್ಪಿನಂಗಡಿ, ಗಂಟೆ 4ರಿಂದ 5ರ ವರೆಗೆ ಭಜನಾ ಸೇವೆ-ಒಡಿಯೂರು ವಜ್ರಮಾತಾ ಭಜನಾ ಮಂಡಳಿ, ಪುತ್ತೂರು, ಸಂಜೆ ಗಂಟೆ 5.30ಕ್ಕೆ ಕ್ಷೇತ್ರದ ತಂತ್ರಿಗಳಿಗೆ ಹಾಗೂ ಇತರ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ಸಂಜೆ ಗಂಟೆ 6.00ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯಾದಿ ಋತ್ವಿಗ್ವರಣ, ಪ್ರಾಸಾದ ಪರಿಗ್ರಹ, ಪ್ರಾಸಾದ ಶುದ್ದಿ, ಅಂಕುರಾರೋಪಣ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 30-04-2023ನೇ ರವಿವಾರ ಬೆಳಿಗ್ಗೆ ಗಂಟೆ 5.00ರಿಂದ ಉಷ ಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಚತುಃಶುದ್ಧಿ, ಧಾರೆ, ಅವಗಾಹ, ಪಂಚಕ ಬಿಂಬಶುದ್ಧಿ, ಖನನಾದಿ ಸ್ಥಳಶುದ್ದಿ, ದಹನ ಪ್ರಾಯಶ್ಚಿತ್ತ, ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮ, ಮಧ್ಯಾಹ್ನ ಗಂಟೆ 12ಕ್ಕೆ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ ಗಂಟೆ 3ರಿಂದ 4ರ ವರೆಗೆ ಭಜನಾ ಸೇವೆ – ಶ್ರೀ ಆದಿಶಕ್ತಿ ಭಜನಾ ಮಂದಿರ, ಬೇರಿಕೆ ಪಡ್ನೂರು, ಅಪರಾಹ್ನ ಗಂಟೆ 4.00ರಿಂದ 5ರ ವರೆಗೆ ಭಜನಾ ಸೇವೆ – ಪಾಲಿಂಜೆ ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿ, ಸಂಜೆ ಗಂಟೆ 5.30ರಿಂದ ಅಂಕುರಪೂಜೆ, ದುರ್ಗಾಪೂಜೆ, ಆಘೋರ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 01-05-2023ನೇ ಸೋಮವಾರ ಬೆಳಿಗ್ಗೆ ಗಂಟೆ 5 ರಿಂದ ಉಷಃಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಸ್ವಶಾಂತಿ, ಶ್ವಾನಶಾಂತಿ, ಅದ್ಭುತಶಾಂತಿ, ಚೋರಶಾಂತಿ, ಹೋಮಾದಿಗಳು ಮಧ್ಯಾಹ್ನ ಗಂಟೆ 12.00ಕ್ಕೆ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ ಗಂಟೆ 3ರಿಂದ 4.00 ಭಜನಾ ಸೇವೆ – ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರ, ಬೆಳ್ಳಿಪ್ಪಾಡಿ, ಅಪರಾಹ್ನ ಗಂಟೆ 4.00 ರಿಂದ 5.0೦ ಭಜನಾ ಸೇವೆ-ಶ್ರೀ ಮಹಾವಿಷ್ಣು ಭಜನಾ ಮಂಡಳಿ, ಶಾಂತಿನಗರ, ಸಂಜೆ 5.30ರಿಂದ ಅಂಕುರ ಪೂಜೆ, ದುರ್ಗಾಪೂಜೆ, ಮಂಟಪಸಂಸ್ಕಾರ, ಕುಂಭೇಶ ಕರ್ಕರೀಪೂಜೆ, ಅನುಜ್ಞಾಕಲಶ ಪೂಜೆ, ಪರಿಕಲಶಪೂಜೆ, ಅಧಿವಾಸಹೋಮ, ಕಲಶಾಧಿವಾಸ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 02-05-2023ನೇ ಮಂಗಳವಾರ ಬೆಳಿಗ್ಗೆ ಗಂಟೆ 5.00ರಿಂದ ಉಷಃಪೂಜೆ, ಅಂಕುರಪೂಜೆ, ಮಹಾಗಣಪತಿ ಹೋಮ, ಸೃಷ್ಟಿತತ್ತ್ವ ಹೋಮ, ತತ್ತ್ವಕಲಶಪೂಜೆ, ತತ್ತ್ವಕಲಶಾಭಿಷೇಕ, ಅನುಜ್ಞಾಕಲಶಾಭಿಷೇಕ, ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಅಪರಾಹ್ನ ಗಂಟೆ 3.00ರಿಂದ 4.೦೦ ಭಜನಾ ಸೇವೆ – ಶ್ರೀ ಅಯ್ಯಪ್ಪ ಭಜನಾ ಮಂದಿರ, ಬೀತಲಪ್ಪು ನೆಕ್ಕಿಲಾಡಿ, ಅಪರಾಹ್ನ ಗಂಟೆ 4.30ರಿಂದ 5.30 ಭಜನಾ ಸೇವೆ – ಶ್ರೀ ಸತ್ಯನಾರಾಯಣ ಭಜನಾ ಮಂದಿರ, ಸುಭಾಷ್‌ ನಗರ, ಸಂಜೆ ಗಂಟೆ 6.00ರಿಂದ ಅನುಜ್ಞಾಬಲಿ, ಕ್ಷೇತ್ರಪಾಲನಲ್ಲಿ ಅನುಜ್ಞಾಪ್ರಾರ್ಥನೆ, ದುರ್ಗಾಪೂಜೆ, ಬಿಂಬಶುದ್ಧಿ ಕಲಶಪೂಜೆ, ಅಂಕುರಾರೋಪಣ, ಅಧಿವಾಸಹೋಮ, ಕಲಶಾಧಿವಾಸ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 03-05-2023ನೇ ಬುಧವಾರ ಬೆಳಿಗ್ಗೆ ಗಂಟೆ 5.00ರಿಂದ ಉಷಃಪೂಜೆ, ಅಂಕುರಪೂಜೆ, ಮಹಾಗಣಪತಿ ಹೋಮ, ಸಂಹಾರತತ್ತ್ವ ಹೋಮ, ತತ್ತ್ವಕಲಶಪೂಜೆ, ಮಂಟಪಸಂಸ್ಕಾರ, ಕುಂಭೇಶ ಕರ್ಕರೀಪೂಜೆ, ನಿದ್ರಾಕಲಶಪೂಜೆ, ವಿದ್ಯೇಶ್ವರಕಲಶಪೂಜೆ, ಶಯ್ಯಾಪೂಜೆ, ವಿದ್ವತ್ ಪ್ರಾರ್ಥನೆ, ತತ್ತ್ವಕಲಶಾಭಿಷೇಕ, ಧ್ಯಾನ ಸಂಕೋಚಕ್ರಿಯೆ, ಜೀವಕಲಶಪೂಜೆ, ಜೀವೋದ್ವಾಸನಕ್ರಿಯೆ, ಜೀವಕಲಶಶಯ್ಯಾರೋಪಣ, ಮಧ್ಯಾಹ್ನ ಗಂಟೆ 12.30ರಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಗಂಟೆ 3.00 ರಿಂದ 4.00 ಭಜನಾ ಸೇವೆ – ಶ್ರೀ ಭ್ರಾಮರಿ ಭಜನಾ ಮಂಡಳಿ, ಕುಂಟ್ಯಾನ, ಅಪರಾಹ್ನ ಗಂಟೆ 4.00 ರಿಂದ 5.00 ಭಜನಾ ಸೇವೆ – ಧರ್ಮಶ್ರೀ ಭಜನಾ ಮಂದಿರ, ಅಶ್ವತ್ಥಕಟ್ಟೆ ಕೋಡಿಂಬಾಡಿ, ಸಂಜೆ ಗಂಟೆ 5.30ರಿಂದ ಅಂಕುರಪೂಜೆ, ಸ್ವಸ್ತಿಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಪೂಜಾಬಲಿ, ಬಿಂಬಶುದ್ಧಿ ಕಲಾಭಿಷೇಕ, ಧ್ಯಾನಾಧಿವಾಸಕ್ರಿಯೆ, ಅಧಿವಾಸಹೋಮ, ಭದ್ರಕಮಂಡಲ ಪೂಜೆ, ಅಧಿವಾಸ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 04-05-2023ನೇ ಗುರುವಾರ ಬೆಳಿಗ್ಗೆ ಗಂಟೆ 5.00ರಿಂದ ಮಹಾಗಣಪತಿ ಹೋಮ, ಅಲ್ಪಪ್ರಾಸಾದಶುದ್ದಿ, ಪ್ರಾಸಾದಪ್ರತಿಷ್ಠೆ, ನಾಂದೀಪುಣ್ಯಾಹ, ನಪುಂಸಕಶಿಲಾ ಪ್ರತಿಷ್ಠೆ, ರತ್ನನ್ಯಾಸಾದಿ ಪೀಠ ಪ್ರತಿಷ್ಠೆ, ಶಯ್ಯಾಮಂಟಪದಿಂದ ಜೀವಕಲಶ, ಬಿಂಬ, ನಿದ್ರಾಕಲಶಾದಿಗಳನ್ನು ಗರ್ಭಗೃಹದ ಒಳಗೆ ಒಯ್ಯುವುದು, ಗಂಟೆ 7.45ರಿಂದ 8.54ವರೆಗೆ ನಡೆಯುವ ವೃಷಭ ಲಗ್ನ ಶುಭಮುಹೂರ್ತದಲ್ಲಿ ಶ್ರೀ ಸಕಲೇಶ್ವರ ದೇವರ ಪುನಃಪ್ರತಿಷ್ಠೆ, ಗಣಪತಿ ದೇವರ ಪ್ರತಿಷ್ಠೆ, ಅಷ್ಟಬಂಧಕ್ರಿಯೆ, ಕುಂಭೇಶಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಜೀವಕಲಶಾಭಿಷೇಕ, ಪ್ರತಿಷ್ಠಾಪೂಜೆ, ಶಿಖರಪ್ರತಿಷ್ಠೆ, ಧೂಮಾವತಿ ದೈವದ ಪ್ರತಿಷ್ಠೆ, ಮಧ್ಯಾಹ್ನ ಗಂಟೆ 12.00ಕ್ಕೆ ಪ್ರತಿಷ್ಠಾಬಲಿ, ಬ್ರಾಹ್ಮಣ ಹಸ್ತೋದಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ ಗಂಟೆ 3 ರಿಂದ 4.೦೦ ಭಜನಾ ಸೇವೆ – ಮಂಜುನಾಥ ಭಜನಾ ಮಂದಿರ, ಕೃಷ್ಣಗಿರಿ ಕೋಡಿಂಬಾಡಿ, ಅಪರಾಹ್ನ ಗಂಟೆ 4.00 ರಿಂದ 5.00 ಭಜನಾ ಸೇವೆ -ದಾಸ ಸಂಕೀರ್ತಾನಾ ಬಳಗ, ಕೋಡಿಂಬಾಡಿ, ರಾತ್ರಿ ಗಂಟೆ 7.00ಕ್ಕೆ ದೇವಾಲಯದ ಮುಂದಿನ ನಿತ್ಯ ನೈಮಿತ್ತಿಕಗಳನ್ನು ನಿಶ್ಚಯಿಸಿ ಎಲ್ಲರು ಸೇರಿ ದೇವರಲ್ಲಿ ಪ್ರಾರ್ಥಿಸುವುದು, ಭದ್ರದೀಪ ಪ್ರತಿಷ್ಠೆ, ಕವಾಟಬಂಧನ, ಅಂಕುರ ಪೂಜೆ, ದುರ್ಗಾಪೂಜೆ, ಸೋಪಾನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 05-05-2023ನೇ ಶುಕ್ರವಾರ ಬೆಳಿಗ್ಗೆ ಗಂಟೆ 5.00ರಿಂದ ಮಹಾಗಣಪತಿ ಹೋಮ, ಅಂಕುರಪೂಜೆ, ತ್ರಿಕಾಲಪೂಜೆ, ಸೋಪಾನಪೂಜೆ, ಇಂದ್ರಾದಿ ದಿಕ್ಪಾಲ ದೇವತೆಗಳ ಪ್ರತಿಷ್ಠೆ, ಮಧ್ಯಾಹ್ನ ಗಂಟೆ 12.00ರಿಂದ ತ್ರಿಕಾಲಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅಪರಾಹ್ನ ಗಂಟೆ 3.00ರಿಂದ 4.00 ಭಜನಾ ಸೇವೆ – ಶ್ರೀ ದೇವಿ ಭಜನಾ ಮಂಡಳಿ, ಸೇಡಿಯಾಪು, ಅಪರಾಹ್ನ ಗಂಟೆ 4.೦0ರಿಂದ 5.00 ಭಜನಾ ಸೇವೆ – ವನಿತಾ ಸಮಾಜ (ರಿ.) ಕೋಡಿಂಬಾಡಿ, ಸಂಜೆ ಗಂಟೆ 5.30ರಿಂದ ತ್ರಿಕಾಲಪೂಜೆ, ಅಂಕುರಪೂಜೆ, ಸೋಪಾನಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 06-05-2023ನೇ ಶನಿವಾರ ಬೆಳಿಗ್ಗೆ ಗಂಟೆ 5.00ರಿಂದ ಮಹಾಗಣಪತಿ ಹೋಮ, ಅಂಕುರಪೂಜೆ, ಸೋಪಾನಪೂಜೆ, ಪ್ರಾಯಶ್ಚಿತ್ತ ಹೋಮ, ಶಾಂತಿಹೋಮ, ತತ್ತ್ವಹೋಮ, ತತ್ತ್ವಕಲಶ ಪೂಜೆ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರೀಪೂಜೆ, ಅಗ್ನಿಜನನ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅಪರಾಹ್ನ ಗಂಟೆ 3 ರಿಂದ 4 ರವರೆಗೆ ಭಜನಾ ಸೇವೆ – ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ, ಮಠಂತಬೆಟ್ಟು, ಅಪರಾಹ್ನ ಗಂಟೆ 4.30ರಿಂದ 5.30 ಭಜನಾ ಸೇವೆ – ಶ್ರೀ ಮಹಾದೇವಿ ಭಜನಾ ಮಂಡಳಿ, ಅರ್ಕ ಕೊಡಿಪ್ಪಾಡಿ, ಸಂಜೆ ಗಂಟೆ 5.30ರಿಂದ ಅಧಿವಾಸ ಹೋಮ, ಮಹಾಬಲಿಪೀಠಾಧಿವಾಸ, ಕಲಶಾಧಿವಾಸ, ಅಧಿವಾಸಬಲಿ, ಸೋಪಾನಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 07-05-2023 ರವಿವಾರ ಬೆಳಿಗ್ಗೆ ಗಂಟೆ 5 ರಿಂದ ಮಹಾಗಣಪತಿ ಹೋಮ, ಕವಾಟ ಉದ್ಘಾಟನೆ, ದೇವರಿಗೆ ತೈಲಾಭಿಷೇಕ, ಪಂಚಾಮೃತಾಭಿಷೇಕ, ಪ್ರಾಯಶ್ಚಿತ್ತ, ಶಾಂತಿ, ತತ್ತ್ವಹೋಮಗಳ ಕಲಶಾಭಿಷೇಕ, ಮಹಾಬಲಿಪೀಠ ಪ್ರತಿಷ್ಠೆ, ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಗಂಟೆ 12.00ಕ್ಕೆ ಆಶ್ಲೇಷ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ವೈದಿಕ ಮಂತ್ರಾಕ್ಷತೆ, ಅಪರಾಹ್ನ ಗಂಟೆ 3 ರಿಂದ 4 ಭಜನಾ ಸೇವೆ – ರಾಜರಾಜೇಶ್ವರಿ ಭಜನಾ ಮಂಡಳಿ, ಅಂಬೆಲ ನೆಕ್ಕಿಲಾಡಿ, ರಾತ್ರಿ ಗಂಟೆ 7.30ಕ್ಕೆ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಶ್ರೀಭೂತಬಲಿ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ.

ದಿನಾಂಕ 08-05-2023 ಸೋಮವಾರ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!