Monday, June 8, 2026
spot_imgspot_img
spot_imgspot_img

ಪುತ್ತೂರು: ಗಾಂಜಾ ಪ್ರಕರಣ; ತಲೆಮರೆಸಿಕೊಂಡಿದ್ದ ಶಫೀಕ್ ಅಂದರ್

- Advertisement -
- Advertisement -

ಪುತ್ತೂರು: ವರ್ಷದ ಹಿಂದೆ ಪಾಟ್ರಕೋಡಿಯಲ್ಲಿ ಪತ್ತೆಯಾದ ಭಾರಿ ಪ್ರಮಾಣದ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಪಾಟ್ರಕೋಡಿಯಲ್ಲಿ ಭಾರಿ ಪ್ರಮಾಣದ ಗಾಂಜಾ ಪ್ರಕರಣದಲ್ಲಿ ಪತ್ತೆ ಮಾಡಿದ ಪೊಲೀಸರು ಅರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ 2ನೇ ಆರೋಪಿ ಕಾಸರಗೋಡು ಮಂಜೇಶ್ವರ ಹೊಸಂಗಡಿ ನಿವಾಸಿ ಮಹಮ್ಮದ್ ಶಫೀಕ್ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಆರೋಪಿ ಮೇಲೆ ವಾರಂಟ್ ಜಾರಿ ಮಾಡಿತ್ತು. ತನಿಖೆ ಕೈಗೆತ್ತಿಕೊಂಡ ಪುತ್ತೂರು ಪೊಲೀಸರು ದ.ಕಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ, ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್ ಅವರ ನಿರ್ದೇಶನದಂತೆ ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಎಸ್.ಐ ಶ್ರೀ ಕಾಂತ್ ರಾಥೋಡ್ ಅವರ ನೇತೃತ್ವ ದಲ್ಲಿ ಎ.ಎಸ್.ಐ ಚಂದ್ರ ಮತ್ತು ಹೆಡ್ಕಾನ್ಸ್ಟೇ ಬಲ್ ಪರಮೇಶ್ವ ರ್ ಅವರು ಆರೋಪಿ ಮಹಮ್ಮದ್ ಶಫೀಕ್ ನನ್ನು ಮಂಜೇಶ್ವರದಲ್ಲಿ ಬಂಧಿಸಿ ಮಂಗಳೂರು 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Related news

error: Content is protected !!