Friday, June 5, 2026
spot_imgspot_img
spot_imgspot_img

ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ; ಮೂವರಿಗೆ ಗಾಯ

- Advertisement -
- Advertisement -

ಪುತ್ತೂರು: ನರಿಮೊಗರು ಶಾಲಾ ಬಳಿ ಮೂರು ಸ್ಕೂಟರ್‌ಗಳ ನಡುವೆ ಅಪಘಾತ ಸಂಭವಿಸಿದ ಘಟನೆ ಜ.23ರಂದು ಬೆಳ್ಳಂ ಬೆಳಗ್ಗೆ ನಡೆದಿದೆ.

ಪುತ್ತೂರು ಕಡೆಗೆ ಬರುತ್ತಿದ್ದ ಸ್ಕೂಟರ್ ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎರಡು ಸ್ಕೂಟರ್‌ಗಳಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರರೊಬ್ಬರು ತೀವ್ರ ಗಾಯಗೊಂಡಿದ್ದು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಉಳಿದಂತೆ ಇನ್ನೊಂದು ಸ್ಕೂಟರ್‌ ಸವಾರ ನರಿಮೊಗರು ದೇವಸ್ಥಾ‍ನದ ಗುಮಾಸ್ತ ವಿಜಿತ್ ಮತ್ತು ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯೊಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!