Thursday, April 25, 2024
spot_imgspot_img
spot_imgspot_img

ಪುತ್ತೂರು: ಪಟಾಕಿ ಗೊಡೌನ್ ಸ್ಫೋಟ; ಮುತ್ತಪ್ಪ ರೈ ಸಹೋದರ ಕರುಣಾಕರ್ ರೈ ವಿರುದ್ಧ ಪೊಲೀಸರಿಂದ ಸೋಮೋಟೋ ಪ್ರಕರಣ ದಾಖಲು

- Advertisement -G L Acharya panikkar
- Advertisement -

ಪುತ್ತೂರು: ಪುತ್ತೂರಿನ ಪಟಾಕಿ ಗೊಡೌನ್ ಗೆ ನಲ್ಲಿ ಪಟಾಕಿ ಸ್ಫೋಟಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲಕ ಪುತ್ತೂರು ಅಶ್ವಿನಿ ಬಾರ್ & ರೆಸ್ಟೋರೆಂಟ್ ಪಾಲುದಾರ ಕರುಣಾಕರ ರೈ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪೊಲೀಸರು ಸೆಕ್ಷನ್ 9B ಅಡಿ ಸೊಮೋಟೋ ಪ್ರಕರಣ ದಾಖಲಿಸಿದ್ದಾರೆ.

ಸೆಕ್ಷನ್ 9ಬಿ ಅಡಿ ಕರುಣಾಕರ್ ರೈ ವಿರುದ್ಧ ಸ್ಫೋಟಕ ದಾಸ್ತಾನು ಗಂಭೀರ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಪೊಲೀಸರು ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ.

ಪುತ್ತೂರು ದರ್ಬೆಯ ಅಶ್ವಿನಿ ಹೊಟೆಲ್ ಮಾಲಕರಾದ ಕರುಣಾಕರ ರೈ ಮಾಲಿಕತ್ವದ ದರ್ಬೆಯ ಆರಾಧ್ಯ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿದ್ದ ಪಟಾಕಿ ಗೊಡೌನ್ ನಲ್ಲಿ ಶೇಖರಿಸಿಟ್ಟ ಪಟಾಕಿ ಸಂಜೆ 6 ಗಂಟೆ ಸಮಯಕ್ಕೆ ಪಟಾಕಿ ಸ್ಫೋಟ ಸಂಭವಿಸಿತು. ಪಟಾಕಿ ಸಿಡಿಯುವ ಶಬ್ದಕ್ಕೆ ದರ್ಬೆ ಸುತ್ತಮುತ್ತಲಿನ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

ಆ ಕಟ್ಟಡದಲ್ಲಿರುವ ಎಲ್ಲಾ ಅಂಗಡಿಯವರು ಬಂದ್ ಮಾಡಿ ಹೊರ ಬಂದಿದ್ದಾರೆ. ದರ್ಬೆಯಲ್ಲಿ ಪಟಾಕಿ ಮಾರುವವರಿಗೆ ಸೇರಿದ ಪಟಾಕಿ ಎನ್ನಲಾಗಿದೆ. ಆದರೆ ಕರುಣಾಕರ ರೈ ತನ್ನ ಮನೆಯ ಉಪಯೋಗಕ್ಕೆ ಇಟ್ಟ ಪಟಾಕಿ ಎಂದು ಸ್ಥಳೀಯ ಪತ್ರಿಕೆಗೆ ಹೇಳಿಕೆ ನೀಡಿದ್ದರು.

ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ಘಟನೆ ನಡೆದಿದೆಯ ಅಥವ ಬೆಂಕಿ ಆಕಸ್ಮಿಕ ನಡೆದಿದೆಯ ಎನ್ನುವ ಬಗ್ಗೆ ತನಿಖೆಯಿಂದ ತಿಳಿದುಬರಬೇಕಷ್ಟೇ. ಆದರೆ ಮಾಧ್ಯಮ ವರದಿ ಆಧರಿಸಿ ರಾಜ್ಯ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ಪೊಲೀಸರಿಗೆ ಸೂಚನೆ ನೀಡಿದರು.

ಪುತ್ತೂರು ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ ನಂತರ ಅಲ್ಲಿದ್ದ ಪಟಾಕಿಯನ್ನು ಪಿಕಪ್ ನಲ್ಲಿ ಬೇರೆ ಕಡೆ ಸಾಗಿಸಲಾಗಿದೆ ಎನ್ನಲಾಗಿದೆ.

- Advertisement -

Related news

error: Content is protected !!