Saturday, June 28, 2025
spot_imgspot_img
spot_imgspot_img

ಪುತ್ತೂರು: ಪ್ರಕಾಶ್ ಫೂಟ್‌ವೇರ್‌ನಿಂದ ಕಳ್ಳತನ, 15ಲಕ್ಷ ರೂ. ನಗದು ಕಳವು

- Advertisement -
- Advertisement -

ಪುತ್ತೂರು: ಮುಖ್ಯ ರಸ್ತೆಯಲ್ಲಿರುವ ಪ್ರಕಾಶ್ ಫೂಟ್‌ವೇರ್ ಅಂಗಡಿಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ನಗದು ಕಳ್ಳತನ ಮಾಡಿದ ಘಟನೆ ನಡೆದಿದೆ.

ಪ್ರಕಾಶ್ ಪೂಟ್‌ವೇರ್‌ ಸಂಸ್ಥೆಯ ಮಾಲಕರು ಇನ್ನೋವ ಕಾರು ಖರೀದಿಗೆಂದು ರೂ.15ಲಕ್ಷವನ್ನು ಡ್ರಾವರ್‌ನಲ್ಲಿ ತೆಗೆದಿಟ್ಟಿದ್ದು, ರಾತ್ರಿ ಅಂಗಡಿಯ ಮೇಲ್ಚಾವಣಿಯ ಹೆಂಚು ತೆಗೆದು ಒಳಗೆ ನುಗ್ಗಿದ ಕದೀಮರು ಹಣವನ್ನು ಎಗರಿಸಿದ್ದಾರೆ. ಹಣದ ಜೊತೆಗೆ ಸಿಸಿ ಕ್ಯಾಮರಾದ ಡಿವಿಆರ್‌ ನ್ನು ಹೊತ್ತೊಯ್ದಿದ್ದಾರೆ.

ಘಟನೆ ಕುರಿತು ಸಂಸ್ಥೆಯ ಮಾಲಕ ನೀಡಿದ ದೂರಿನಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಶೋಧ ಕಾರ್ಯ ನಡೆಸಿದೆ.

- Advertisement -

Related news

error: Content is protected !!