Monday, July 7, 2025
spot_imgspot_img
spot_imgspot_img

ಪುತ್ತೂರು: ಪ್ರಯಾಣಿಕರ ತಂಗುದಾಣದ ಹಿಂಬದಿ ಅಕ್ರಮ ಮದ್ಯ ಮಾರಾಟ; ಆರೋಪಿ ಖಾಕಿ ವಶಕ್ಕೆ!

- Advertisement -
- Advertisement -

ಪುತ್ತೂರು: ಪ್ರಯಾಣಿಕರ ತಂಗುದಾಣದ ಹಿಂಬದಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿಓರ್ವನನ್ನು ಬಂಧಿಸಿದ ಘಟನೆ ಪಾಣಾಜೆ ಗ್ರಾಮದ ಆರ್ಲಪದವು ಆ.29ರಂದು ಸಂಜೆ ನಡೆದಿದೆ

ಬಂಧಿತ ಆರೋಪಿಯನ್ನು ಮಂಜೇಶ್ವರ ತಾಲೂಕಿನ ಏಣ್ಮಕಜೆ ಗ್ರಾಮದ ಪೆರ್ಲತ್ತಡ್ಕ ನಿವಾಸಿ ಕೃಷ್ಣ ನಾಯ್ಕ್ ಎನ್ನಲಾಗಿದೆ.

ವಾರಂತ್ಯ ಕರ್ಫ್ಯೂ ಹಿನ್ನೆಲೆ ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಉದಯರವಿ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಆರ್ಲಪದವು ಪ್ರಯಾಣಿಕರ ತಂಗುದಾಣದ ಹಿಂಬದಿ ಅಕ್ರಮವಾಗಿ ಮದ್ಯವನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.

ಪೊಲೀಸರು ದಾಳಿ ನಡೆಸಿದ ವೇಳೆ ಮದ್ಯ ಖರೀದಿಸುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದು, ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ರೂ.1,120 ಮೌಲ್ಯದ ಮದ್ಯ, ಮದ್ಯ ಮಾರಾಟದಿಂದ ಬಂದ ರೂ. 1,450 ನಗದನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!