Saturday, May 11, 2024
spot_imgspot_img
spot_imgspot_img

ಪುತ್ತೂರು: ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪುತ್ತೂರು ತಾಲೂಕು ದ್ವಿತೀಯ ಸ್ಥಾನ

- Advertisement -G L Acharya panikkar
- Advertisement -

ಪುತ್ತೂರು: ಜಿಲ್ಲಾ ಮಟ್ಟದ ಪ್ರಾಥಮಿಕ U-14 ವಯೋಮಾನ ವರ್ಗದ ಬಾಲಕಿಯರ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪುತ್ತೂರು ತಾಲೂಕು ದ್ವಿತೀಯ ಸ್ಥಾನ ಗಳಿಸಿದೆ. ಈ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ಸಮನ್ವಿತಾ ಕೆ ಮತ್ತು ಡಿಹರ್ಷ ಇವರು ಪುತ್ತೂರು ತಾಲೂಕನ್ನು ಪ್ರತಿನಿಧಿಸಿದ್ದಾರೆ.

ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ದ.ಕ.ಜಿ.ಪಂ.ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ಮತ್ತು ದ.ಕ.ಜಿ.ಪಂ.ಸರಕಾರಿ ಪ್ರೌಢ ಶಾಲೆ ನ್ಯೂಪಡ್ಡು, ಹರೇಕಳ ಇದರ ಆಶ್ರಯದಲ್ಲಿ ಜುಲೈ 23ರಂದು ಮಂಗಳೂರು ವಿಶ್ವವಿದ್ಯಾನಿಲಯದ ಒಳಾಂಗಣ ಕ್ರೀಡಾಂಗಣ, ಕೊಣಾಜೆ ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ U-14 ವಯೋಮಾನ ವರ್ಗದ ಬಾಲಕಿಯರ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪುತ್ತೂರು ತಾಲೂಕು ದ್ವಿತೀಯ ಸ್ಥಾನ ಗಳಿಸಿದೆ.

ಈ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ಸಮನ್ವಿತಾ ಕೆ (ವಿನ್ಯಾಸ್ ಕನ್ ಸ್ಟ್ರಕ್ಷಷನ್ ಮಾಲಕ ಬಪ್ಪಳಿಗೆಯ ಕಿಶೋರ್ ಕುಮಾರ್ ಮತ್ತು ರೂಪಶ್ರೀ ಕೆ ರವರ ಪುತ್ರಿ), ಡಿಹರ್ಷ (ಚಿಕ್ಕ ಪುತ್ತೂರಿನ ಎಸ್ ಶಿವಕುಮಾರ್ ಮತ್ತು ಎಸ್ ಪೋನ್ನಿ ರವರ ಪುತ್ರಿ) ಇವರುಗಳು ಪುತ್ತೂರು ತಾಲೂಕನ್ನು ಪ್ರತಿನಿಧಿಸಿರುತ್ತಾರೆ. ಇದರಲ್ಲಿ 8ನೇ ತರಗತಿಯ ಸಮನ್ವಿತಾ ಕೆ ಇವರು ಅಕ್ಟೋಬರ್ ದಲ್ಲಿ ಚಾಮರಾಜನಗರ, ಮೈಸೂರು ಜಿಲ್ಲೆ ಇಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ದಕ್ಷಿಣ ಜಿಲ್ಲೆಯನ್ನು ಪ್ರತಿನಿಧಿಸಿ, ಭಾಗವಹಿಸಲಿದ್ದಾಳೆ ಎಂದು ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -

Related news

error: Content is protected !!