Friday, May 3, 2024
spot_imgspot_img
spot_imgspot_img

ಪುತ್ತೂರು : ಶಾಫಿ ಬೆಳ್ಳಾರೆ ಚುನಾವಣೆ ಸ್ಪರ್ಧೆಗೆ ಪ್ರವೀಣ್ ನೆಟ್ಟಾರು ಪೋಷಕರ ತೀವ್ರ ವಿರೋಧ

- Advertisement -G L Acharya panikkar
- Advertisement -

ಪುತ್ತೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಶಾಫಿ ಬೆಳ್ಳಾರೆಯನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಎಂದು ಎಸ್‌ಡಿಪಿಐ ಘೋಷಿಸಿರುವುದಕ್ಕೆ, ಪ್ರವೀಣ್‌ ನೆಟ್ಟಾರು ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಶಾಫಿ ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಯಾಗಿದ್ದು, ಜೈಲಿನಲ್ಲಿದ್ದಾನೆ. ಆದರೆ ಆತನನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಎಸ್‌ಡಿಪಿಐ ಘೋಷಿಸಿದೆ. ಯಾವುದೇ ಕಾರಣಕ್ಕೂ ಶಾಫಿ ಬೆಳ್ಳಾರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಪ್ರವೀಣ್‌ ನೆಟ್ಟಾರು ಅವರ ಪೋಷಕರು ಒತ್ತಾಯಿಸಿದ್ದಾರೆ. ಅನ್ಯಾಯವಾಗಿ ನಮ್ಮ ಮಗನನ್ನು ಶಾಫಿ ಹತ್ಯೆ ಮಾಡಿದ್ದಾನೆ. ಅಧಿಕಾರ ಪಡೆದರೆ ಮತ್ತಷ್ಟು ಮಂದಿಯನ್ನು ಕೊಲ್ಲಬಹುದು. ನಮಗೆ ಮನೆಯಿಂದ ಹೊರಗೆ ಹೋಗಲಾರದ ಸ್ಥಿತಿ ಬರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಫಿ ಬೆಳ್ಳಾರೆ 2022ರ ಜುಲೈ 26 ರಂದು ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿದ್ದಾನೆ. ಈ ಕೊಲೆಯಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿ ಪಡೆದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿತ್ತು. ಈಗ ಶಾಫಿ ಜೈಲಿನಲ್ಲಿದ್ದಾನೆ.

- Advertisement -

Related news

error: Content is protected !!