Saturday, May 18, 2024
spot_imgspot_img
spot_imgspot_img

ಪೆಟ್‌ಶಾಪ್‌ನಿಂದ ನಾಯಿಮರಿ ಕಳ್ಳತನ; ಇಂಜಿನಿಯರ್ ವಿದ್ಯಾರ್ಥಿಗಳಿಬ್ಬರ ಬಂಧನ

- Advertisement -G L Acharya panikkar
- Advertisement -

ಕೇರಳ : ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಬ್ಬರು ನಾಯಿ ಮರಿಯನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಬಂಧಿಯಾಗಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಬಂಧಿತರನ್ನು ಉಡುಪಿ ಮೂಲದವರು ಎಂದು ಗುರುತಿಲಾಗಿದ್ದು , ಇಬ್ಬರು ಇಂಜಿನಿಯರ್​ ವಿದ್ಯಾರ್ಥಿಗಳಾದ ನಿಖಿಲ್​ ಮತ್ತು ಶ್ರೇಯಾಳನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಆರೋಪಿಗಳಿಬ್ಬರನ್ನು ಕೇರಳದ ಪನಂಗದ ಠಾಣಾ ಪೊಲೀಸರು ಕರ್ನಾಟಕದ ಕಾರ್ಕಳದಲ್ಲಿ ಬಂಧಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಂದ 45 ದಿನದ ಹಾಗೂ 20 ಸಾವಿರ ರೂಪಾಯಿ ಮೌಲ್ಯದ ನಾಯಿ ಮರಿಯನ್ನು ವಶಕ್ಕೆ ಪಡೆಯಲಾಗಿದೆ.

ನಿಖಿಲ್​ ಮತ್ತು ಶ್ರೇಯಾ ಕೇರಳದ ನೆಟ್ಟೂರಿನಲ್ಲಿರುವ ಸಾಕು ಪ್ರಾಣಿಗಳ ಅಂಗಡಿಯಿಂದ ನಾಯಿ ಮರಿಯನ್ನು ಕದ್ದಿದ್ದರು. ಈ ಘಟನೆ ಜ.28 ರಂದು ಸಂಜೆ 7 ಗಂಟೆಗೆ ನಡೆದಿತ್ತು. ಬೆಕ್ಕು ಖರೀದಿಸಲೆಂದು ಇಬ್ಬರು ಪೆಟ್​ ಶಾಪ್​ಗೆ ತೆರಳಿದ್ದರು. ಅಂಗಡಿ ಮಾಲೀಕನ ಗಮನ ಬೇರೆಡೆಗೆ ಹೋದಾಗ ಪಂಜರದಲ್ಲಿದ್ದ ನಾಯಿ ಮರಿಯನ್ನು ಎತ್ತಿಕೊಂಡು ಹೆಲ್ಮೆಟ್​ ಒಳಗೆ ಹಾಕಿಕೊಂಡು ಹೋಗಿದ್ದಾರೆ. ಮೂರು ಸ್ಪಿಟ್ಜ್ ನಾಯಿಮರಿಗಳಲ್ಲಿ ಒಂದನ್ನು ಕದ್ದಿದ್ದಾರೆ. ಅಲಪ್ಪುಳ ಮೂಲದವರೊಬ್ಬರ ಬೇಡಿಕೆಯಂತೆ ಸ್ಪಿಟ್ಜ್ ನಾಯಿಮರಿಗಳನ್ನು ತರಲಾಗಿತ್ತು.

ಇಬ್ಬರು ತೆರಳಿದ ಬಳಿಕ ಆಲಪ್ಪುಳ ಮೂಲದ ವ್ಯಕ್ತಿ ನಾಯಿಮರಿಗಾಗಿ ಬಂದಾಗ ಅಂಗಡಿಯ ಮಾಲೀಕರಿಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ. ನಾಯಿಮರಿ ಸ್ಥಳದಿಂದ ಓಡಿಹೋಗಿರಬಹುದು ಎಂದು ಅವರು ಮೊದಲು ಭಾವಿಸಿದ್ದರು. ಆದರೆ, ನಂತರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ನಿಖಿಲ್​ ಮತ್ತು ಶ್ರೇಯಾ ಅವರು ಸಂಚರಿಸಿದ ಮಾರ್ಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ವೈಟ್ಟಿಲದ ಅಂಗಡಿಯೊಂದರಲ್ಲಿ ಇಬ್ಬರೂ ಆಹಾರ ಕಳ್ಳತನ ಮಾಡಿರುವುದೂ ಗಮನಕ್ಕೆ ಬಂದಿದೆ. ಪೆಟ್​ ಶಾಪ್​ ಮಾಲೀಕರು ದೂರು ದಾಖಲಿಸಿದ್ದು, ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!