- Advertisement -
- Advertisement -



ಪೋಷಕರ ಜಗಳದಿಂದ ಬೇಸತ್ತು ಇಬ್ಬರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ನಡೆದಿದೆ.
ಸ್ಥಳೀಯ ಕಾರ್ಪೊರೇಟರ್ ಅಸೀಮ್ ರಜಾ ಅವರ ಪುತ್ರಿಯರಾದ ಕಾಶಿಶ್ (20) ಮತ್ತು ಆಕೆಯ ಸಹೋದರಿ ಮುನ್ನಿ (18) ಭಾನುವಾರ ಸಂಜೆ ವಿಷ ಸೇವಿಸಿದ್ದಾರು ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ನೀಡುವ ವೇಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಅವರ ಪೋಷಕರು ಆಗಾಗ ಜಗಳವಾಡುತ್ತಿದ್ದರು, ಭಾನುವಾರವೂ ಅವರಿಬ್ಬರ ನಡುವೆ ಇಂತಹದೊಂದು ಜಗಳವಾಗಿತ್ತು. ಇದರಿಂದ ಬೇಸತ್ತ ಅವರ ಪುತ್ರಿಯರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement -