Friday, April 26, 2024
spot_imgspot_img
spot_imgspot_img

ಪ್ರಕಟಗೊಂಡ SSLC ಫಲಿತಾಂಶ : 145 ವಿದ್ಯಾರ್ಥಿಗಳಿಗೆ 625 ಅಂಕ.!

- Advertisement -G L Acharya panikkar
- Advertisement -

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್ sslc.karnataka.gov.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಹಾಗೆಯೇ ಮಧ್ಯಾಹ್ನ ಆಯಾ ಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್‌ಎಂಎಸ್ ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ.

8.7 ಲಕ್ಷ ವಿದ್ಯಾರ್ಥಿಗಳ ಭವಿಷ್ಯ; ಕೋವಿಡ್ ನಡುವೆಯೂ ಕರ್ನಾಟಕದಲ್ಲಿ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 15,387 ಶಾಲೆಗಳಿಂದ ಒಟ್ಟು 8,73,884 ವಿದ್ಯಾರ್ಥಿಗಳು ಹಾಜರಾಗಿದ್ದರು. ಮಾ. 28 ರಿಂದ ಏ. 11 ರ ವರೆಗೆ ಪರೀಕ್ಷೆ ನಡೆದಿತ್ತು. ಹದಿನೈದು ಸಾವಿರ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಫಲಿತಾಂಶದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಇಂದು ಉತ್ತರ ಸಿಗಲಿದೆ.

ಈ ಬಾರಿ 85.63% ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿನಿಯರೇ ಮೇಲುಗೈ.

ವೆಬ್‌ಸೈಟ್‌ನಲ್ಲಿ ಫಲಿತಾಂಶ ಮತ್ತು ಅಂಕಪಟ್ಟಿ ಪಡೆಯುವುದು ಹೇಗೆ?

  • sslc.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
  • 10ನೇ ತರಗತಿ ಫಲಿತಾಂಶ ಎಂದು ತೋರಿಸುವ ಲಿಂಕ್‌ ಕ್ಲಿಕ್‌ ಮಾಡಿ,
  • ನಂತರ KSEEB SSLC ಫಲಿತಾಂಶ 2022 ಎಂಬ ಲಾಗಿನ್ ವಿಂಡೋವನ್ನು ತೋರಿಸುತ್ತದೆ.
  • kseeb.Kar.nic.in ವಿಂಡೋದಲ್ಲಿ ನೋಂದಣಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ಭರ್ತಿ ಮಾಡಿ
  • ವೆಬ್‌ಸೈಟ್‌ ಪರದೆಯ ಮೇಲೆ ನಿಮ್ಮ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಾಣುತ್ತದೆ.

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ವಿದ್ಯಾಥಿರ್ನಿಯರು: 85.63%, ಕಳೆದ ಹತ್ತು ವರ್ಷದಲ್ಲಿ ದಾಖಲೆಯ ಫಲಿತಾಂಶ ಕಳದು ಹತ್ತು ವರ್ಷದಲ್ಲಿ ದಾಖಲೆಯ ಫಲಿತಾಂಶ 3,720279 – 90.29 ಬಾಲಕೀಯರು ಪಾಸ್, ಬಾಲಕರು – 81.3%, ಒಟ್ಟು ಗ್ರೇಸ್ ಅಂಕಗಳ ಮೂಲಕ ಪಾಸ್ – 40061 ವಿದ್ಯಾರ್ಥಿಗಳು ಗ್ರೇಸ್ ಅಂಕಗಳ ಮೂಲಕ ಅಧಿಕ ವಿದ್ಯಾರ್ಥಿಗಳು ಪಾಸ್ 625-625 ತಗೆದುಕೊಂಡ ವಿದ್ಯಾರ್ಥಿಗಳ ಸಂಖ್ಯೆ – 145

ವಿದ್ಯಾರ್ಥಿಗಳಿಗೆ ಶೇ.10 ರಷ್ಟು ಗ್ರೇಸ್‌ ಮಾರ್ಕ್ಸ್‌
ಉತ್ತೀರ್ಣಕ್ಕೆ ಬೆರಳಿಣಿಕೆಯಷ್ಟು ಅಂಕಗಳ ಕೊರತೆ ಹೊಂದಿರುವ ವಿದ್ಯಾರ್ಥಿಗಳಿಗೆ ಶೇಕಡಾ 10 ರಷ್ಟು ಗ್ರೇಸ್‌ ಮಾರ್ಕ್ಸ್‌ ನಿಡಲಾಗಿದೆ.

ಕಳೆದ ವರ್ಷ ಕೋವಿಡ್‌ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ 5 ಅಂಕಗಳ ಬದಲಾಗಿ 10 ಕೃಪಾಂಕಗಳನ್ನು ನೀಡಲಾಗಿತ್ತು. ಈ ಬಾರಿಯೂ ಕೂಡಾ ಕೊರೊನಾ ಎರಡನೇ ಅಲೆ ಇದ್ದಿದ್ದರಿಂದ ಮಕ್ಕಳಿಗೆ ಸರಿಯಾದ ಭೌತಿಕ ತರಗತಿಗಳು ನಡೆಯದಿರುವ ಕಾರಣ 10 ಗ್ರೇಸ್‌ ಮಾರ್ಕ್ಸ್‌ ಗಳನ್ನು ಶಿಕ್ಷಣ ಇಲಾಖೆ ನೀಡಿದೆ.

145 ವಿದ್ಯಾರ್ಥಿಗಳಿಗೆ 625 ಕ್ಕೆ 625 ಅಂಕ

625 ಕ್ಕೆ 625 ಅಂಕ ಪಡೆದವರು : ಅಮಿತ್ ಮಾದರ್ ವಿಜಯಪುರ, ಭೂಮಿಕಾ ಬಿ ಆರ್ ತುಮಕೂರು, ಪ್ರವೀಣ ನೀರಲಗಿ, ಹಾವೇರಿ ಸಹನಾ ರಾಯರ್, ಬೆಳಗಾವಿ ಐಶ್ವರ್ಯ ಕನಸ, ವಿಜಯಪುರ ಆಕೃತಿ ಎಸ್ ಎಸ್ ಚಿಕ್ಕಮಗಳೂರು ಅರ್ಜುನ್ ನಾಯ್, ಹಾಸನ ಚಿರಾಗ್ ಮಹೇಶ್ ನಾಯ್ಕ, ಉತ್ತರಕನ್ನಡ ಗಾಯತ್ರಿ, ಉಡುಪಿ ನಿಶಾ ಉಡುಪಿಪ್ರಗತಿ ಹೆಚ್‌ಎನ್‌ ಹಾಸನ145 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ.

ಮರು ಮೌಲ್ಯಮಾಪನಕ್ಕೆ ಮೇ 30 ಕೊನೆಯ ದಿನ

ಮರುಮೌಲ್ಯಪಾಪನಕ್ಕೂ ಈ ತಿಂಗಳು 20ರಿಂದ 30ನೇ ತಾರೀಖಿನವರೆಗೆ ಅವಕಾಶವಿದೆ. ಮೌಲ್ಯಮಾಪನದ ಉತ್ತರ ಪತ್ರಿಕೆಯ ಮರುಎಣಿಕೆ, ಉತ್ತರ ಪತ್ರಿಕೆಯ ನಕಲು ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಮೇ 24ರಿಂದ ಜೂನ್ 6ರವರೆಗೆ ಅರ್ಜಿ ಸಲ್ಲಿಸಬೇಕು. ಉತ್ತರ ಪತ್ರಿಕೆಗಳನ್ನೂ ಸ್ಕ್ಯಾನ್ ಮಾಡಿ ವೆಬ್‌ಸೈಟ್‌ಗೆ ಹಾಕುತ್ತೇವೆ. ಅಲ್ಲಿಂದಲೇ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.

- Advertisement -

Related news

error: Content is protected !!