Wednesday, May 1, 2024
spot_imgspot_img
spot_imgspot_img

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದಲ್ಲಿ ಪಿಎಫ್‌ಐ ಭಾಗಿ; ಗೆಜೆಟ್ ನಲ್ಲಿ ಕೇಂದ್ರ ಗೃಹ ಇಲಾಖೆ ಉಲ್ಲೇಖ; 10 ಮಂದಿಯನ್ನು ಕೊಂದಿದ್ದಾರೆ…!? ಭಯಾನಕ ಸತ್ಯ ಬಹಿರಂಗ

- Advertisement -G L Acharya panikkar
- Advertisement -
astr

ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟರು ಕೊಲೆ ಪ್ರಕರಣದಲ್ಲಿ ಪಿಎಫ್ ಐ ಸಂಘಟನೆ ಭಾಗಿಯಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಗೆಜೆಟ್ ನಲ್ಲಿ ಉಲ್ಲೇಖಿಸಿದೆ.

ಪಿಎಫ್‌ಐ ನಿಷೇಧಕ್ಕೆ ಅಗತ್ಯವಾದ ಕಾರಣಗಳನ್ನು ಗೆಜೆಟ್ ನಲ್ಲಿ ಉಲ್ಲೇಖಿಸಿರುವ ಕೇಂದ್ರ ಗೃಹ ಇಲಾಖೆಯು ಕೇರಳ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ನಡೆದ ಹಲವು ಕೊಲೆ ಪ್ರಕರಣಗಳಲ್ಲಿ, ಪಿಎಫ್ ಐ ಭಾಗಿಯಾಗಿತ್ತು ಎಂದು ಉಲ್ಲೇಖಿಸಿದೆ.

2016 ರಲ್ಲಿ ಕರ್ನಾಟಕದಲ್ಲಿ ನಡೆದ ರುದ್ರೇಶ್, ಪ್ರವೀಣ್ ಹಾಗೂ ಶರತ್‌ ಕೊಲೆ ಪ್ರಕರಣದಲ್ಲಿ, ಪಿಎಫ್‌ಐ ಕಾರ್ಯಕರ್ತರು ಭಾಗಿಯಾಗಿದ್ದರು 2022ರಲ್ಲಿ ನಡೆದ ಪ್ರವೀಣ್ ಕೊನೆಯಲ್ಲಿ ಇದೇ ಸಂಘಟನೆ ಕಾರ್ಯಕರ್ತರ ಪಾತ್ರ ಇದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

10 ಮಂದಿಯನ್ನು ಕೊಂದಿದ್ದಾರೆ…!? ಭಯಾನಕ ಸತ್ಯ ಬಹಿರಂಗ

ಪಿಎಫ್‌ಐ ಹಾಗೂ ಇನ್ನಿತರ ಸಂಘಟನೆ ಬ್ಯಾನ್‌ ಹಿಂದಿನ ಒಂದೊಂದೇ ಕಾರಣವನ್ನು ಕೇಂದ್ರೀಯ ಗೃಹ ಇಲಾಖೆ ಬಿಚ್ಚಿಟ್ಟಿದೆ. ದೇಶದಲ್ಲಿ ನಡೆಯುವ ಭಯೋತ್ಪಾದನ ಕೃತ್ಯ ಹೇಗೆಲ್ಲಾ ನಡೆಯುತ್ತಿತ್ತು ಎಂಬುವುದನ್ನು ಉಲ್ಲೇಖಿಸಿದೆ.

ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ನಡೆದ ಹತ್ಯೆಯ ಹಿಂದೆ ಪಿಎಫ್‌ಐ ಕೈವಾಡ ಇರುವುದು 100% ರಷ್ಟು ಖಚಿತಗೊಂಡಿದೆ. ಕೇರಳದ ಸಂಜಿತ್, ನಂದು, ಅಭಿಮನ್ಯು, ಬಿಬಿನ್, ತಮಿಳುನಾಡಿನ ವಿ ರಾಮಲಿಂಗಮ್, ಸಸಿ ಕುಮಾರ್‌, ಕರ್ನಾಟಕದ ಶರತ್, ರುದ್ರೇಶ್‌, ಪ್ರವೀಣ್ ಪೂಜಾರಿ ಹಾಗೂ ಪ್ರವೀಣ್ ನೆಟ್ಟಾರು ಅವರ ಹತ್ಯೆಯಲ್ಲಿ ಪಿಎಫ್‌ಐ ನೇರವಾಗಿ ಭಾಗಿಯಾಗಿರುವುದು ತನಿಖೆ ವೇಳೆ ಸ್ಪಷ್ಟವಾಗಿದೆ.

- Advertisement -

Related news

error: Content is protected !!