- Advertisement -
- Advertisement -


ವಿ ಕೇರ್ ಲ್ಯಾಬೋರೇಟರೀಸ್ ಹಾಗೂ ವಿ.ಟಿವಿ ಸಹಭಾಗಿತ್ವದಲ್ಲಿ ವಿಟ್ಲ, ಪುತ್ತೂರು ಅಡ್ಯನಡ್ಕ ಶಾಖೆಗಳಲ್ಲಿ ಉಚಿತ ಮಧುಮೇಹ, ಥೈರಾಯ್ಡ್, ರಕ್ತದೊತ್ತಡ, ಇಸಿಜಿ ತಪಾಸಣಾ ಶಿಬಿರವು ಫೆ. 9 ರಿಂದ 12ರ ವರೆಗೆ ನಡೆಯಲಿದೆ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಮಾಡಿಸಿಕೊಳ್ಳುವ ರೋಗಿಗಳಿಗೆ ಯಾವುದೇ ರಕ್ತ ಪರೀಕ್ಷೆಯಲ್ಲಿ 50 % ಹಾಗೂ ಎಲ್ಲಾ ಪರೀಕ್ಷೆಗಳ ಮೇಲೆ 30 % ರಿಯಾಯಿತಿ ಇದೆ.

ದೇಶ ವಿದೇಶಗಳಿಂದ ಆಮದು ಮಾಡಿದಂತಹ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಿಮ್ಮ ಶರೀರದ ವಿವಿಧ ಬಗೆಯ ರಕ್ತ ಪರೀಕ್ಷೆಗಳನ್ನು ಶೀಘ್ರ ಸಮಯದಲ್ಲಿ ಮಾಡಿಕೊಡಲಾಗುವುದು. ಅಲ್ಲದೇ SMS, E-mail ಮೂಲಕ ನಿಮ್ಮ ಮೊಬೈಲ್’ಗೆ ಶೀಘ್ರ ಫಲಿತಾಂಶ ಬರಲಿದೆ. ಮನೆಯಿಂದಲೇ ರಕ್ತ ಸಂಗ್ರಹ ಮಾಡಿ ಶೀಘ್ರ ರಿಪೋರ್ಟ್ ತಲುಪಿಸುವ ಸೌಲಭ್ಯದ ವ್ಯವಸ್ಥೆಯಿದೆ.
ಥೈರಾಯ್ಡ್ ಲಕ್ಷಣಗಳು
- ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ
- ಶೀತಕ್ಕೆ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು
- ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು.
- ಹೆಂಗಸರಿಗೆ ಅತಿಯಾದ ಮಾನಸಿಕ ಸ್ರಾವ ಅಥವಾ ನಿಯಮ ತಪ್ಪಿದ ಮಾನಸಿಕ ಸ್ರಾವ.
- ಮೃದುವಾದ ಕರ್ಕಶ ಸ್ವರ, ಗಂಟಲಿನಲ್ಲಿ ಊದುಕೊಳ್ಳುವಿಕೆ.
- ಅಧಿಕ ಎದೆ ಬಡಿತ ಅಥವಾ ರಕ್ತದೊತ್ತಡ, ಈ ಗುಣಲಕ್ಷಣ ಇರುವವರು ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



- Advertisement -