Friday, June 27, 2025
spot_imgspot_img
spot_imgspot_img

ಬಂಟ್ಟಾಳ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು!!

- Advertisement -
- Advertisement -

ಬಂಟ್ವಾಳ : ಮನೆಯ ಬೀಗ ಒಡೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮನೆಯಿಂದ ಎಂದಿನಂತೆ ಮನೆಯ ಮಾಲಕಿ ರೋಹಿಣಿ ಹಾಗೂ ಅವರ ಗಂಡ ಇಬ್ಬರು ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗಿದ್ದು, ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಬಚ್ಚಲು ಕೋಣೆಯಲ್ಲಿ ಇರಿಸಿ ಹೋಗಿದ್ದರು. ನಂತರ ಸಂಜೆ ಗಂಡ ಹೆಂಡತಿ ಕೆಲಸ ಮುಗಿಸಿ ಮನೆಗೆ ಬಂದು ಕೋಣೆಯಲ್ಲಿದ್ದ ಗೊಡ್ರೆಜ್ ಓಪನ್ ಮಾಡಿ ನೋಡಿದಾಗ ಅದರೊಳಗಿದ್ದ, ಚಿನ್ನಾಭರಣಗಳು ಕಳವುವಾಗಿರುವುದು ಗಮನಕ್ಕೆ ಬಂದಿದೆ .

ಒಟ್ಟು 3,11,550 ರೂ. ಮೌಲ್ಯದ ನಗನಗದು ಕಳವುವಾಗಿದ್ದು, ಸಣ್ಣ ಪ್ಲಾಸಿಕ್‌ ಬಾಕ್ಸ್‌ನಲ್ಲಿ ಇಟ್ಟಿದ್ದ ಕಿವಿಯ ಬೆಂಡೋಳೆ ಅಂದಾಜು 10 ಗ್ರಾಂ, 3 ಉಂಗುರಗಳು ಅಂದಾಜು ತೂಕ 8 ಗ್ರಾಂ, ಹವಳದ ಸರ ಅಂದಾಜು ತೂಕ 20 ಗ್ರಾಂ ಹಾಗೂ ಕರಿಮಣಿ ಸರ ಅಂದಾಜು ತೂಕ 35 ಗ್ರಾಂ, 2 ಕೈಬಳೆಗಳು ಅಂದಾಜು ತೂಕ 20 ಗ್ರಾಂ, ಒಟ್ಟು ತೂಕ 93 ಗ್ರಾಂ ಆಗಿದೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಹಗಲು ಹೊತ್ತಿನಲ್ಲಿ ಮನೆಯಿಂದ ಕಳ್ಳತನ ಮಾಡಿದ್ದಾರೆ ಎಂದು ಗ್ರಾಮಾಂತರ ಪೋಲೀಸ್ ಠಾಣೆಗೆ ಮನೆಯ ಮಾಲಕಿ ರೋಹಿಣಿ ದೂರು ನೀಡಿದ್ದು, ಸ್ಥಳಕ್ಕೆ ಗ್ರಾಮಾಂತರ ಪೋಲೀಸ್ ಎಸ್.ಐ. ಉದಯ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!