Friday, June 19, 2026
spot_imgspot_img
spot_imgspot_img

ಬಂಟ್ವಾಳ: ಕಾರಿಂಜೇಶ್ವರ ದೇವಸ್ಥಾನದಲ್ಲಿ ದೇಗುಲದ ಪಾವಿತ್ರ್ಯತೆ ಪಾಲಿಸುವಂತೆ ಪೊಲೀಸರಿಂದ ಎಚ್ಚರಿಕೆಯ ಬ್ಯಾನರ್!

- Advertisement -
- Advertisement -

ಬಂಟ್ವಾಳ: ಶ್ರೀ ಕಾರಿಂಜೇಶ್ವರ ದೇವಸ್ಥಾನದ ಪರಿಸರದಲ್ಲಿ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ತರುವ ಚಟುವಟಿಕೆಗಳನ್ನು ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದ್ದು ಈ ಬಗ್ಗೆ ಎಚ್ಚರಿಕೆಯ ಬ್ಯಾನರ್ ಒಂದನ್ನು ಪೊಲೀಸರು ದೇವಾಲಯದ ಪರಿಸರದಲ್ಲಿ ಅಳವಡಿಸಿದ್ದಾರೆ.

ಶ್ರೀ ಕಾರಿಂಜೇಶ್ವರ ದೇವಸ್ಥಾನದ ಪರಿಸರದಲ್ಲಿ ದೇಗುಲದ ಪಾವಿತ್ರ್ಯಕ್ಕೆ ಧಕ್ಕೆ ತರುವಂತಹ ಮದ್ಯಪಾನ,ಧೂಮಪಾನ ಅಥವಾ ಇನ್ನಾವುದೇ ಅನೈತಿಕ ಚಟುವಟಿಕೆಗಳನ್ನು ಮಾಡಬಾರದು.

ಇಂತಹ ಚಟುವಟಿಕೆಗಳು ಪರಿಸರದಲ್ಲಿ ಕಂಡು ಬಂದಲ್ಲಿ ತುರ್ತು ಸ್ಪಂದನಾ ಸೇವೆ ನಂಬರ್ (ERSS): 112, ಪುಂಜಾಲಕಟ್ಟೆ ಪೊಲೀಸ್ ಠಾಣೆ 08256-279375, 8277986411 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಎಂದು ಪ್ರಕಟನೆಯ ಬ್ಯಾನರ್ ನ್ನು ಪೋಲೀಸರು ಕಾರಿಂಜ ದೇವಾಲಯದ ಪರಿಸರದಲ್ಲಿ ಹಾಕಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡಿದ ಅನೇಕ ಘಟನೆಗಳು ಮರುಕಳಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಎಚ್ಚರಿಕೆ ನೀಡಿದೆ.

- Advertisement -

Related news

error: Content is protected !!