Tuesday, June 9, 2026
spot_imgspot_img
spot_imgspot_img

ಬಂಟ್ವಾಳ: ಪಿಕಪ್‌ ಮತ್ತು ಕಾರು ಮುಖಾಮುಖಿ ಢಿಕ್ಕಿ; ಮನೆಗೆ ನುಗ್ಗಿದ ಪಿಕಪ್‌

- Advertisement -
- Advertisement -
vtv vitla

ಬಂಟ್ವಾಳ: ಪಿಕಪ್‌ ವಾಹನ ಹಾಗೂ ಹ್ಯುಂಡೈ ಕ್ರೆಟ್ಟಾ ಕಾರಿನ ಮಧ್ಯೆ ಢಿಕ್ಕಿ ಸಂಭವಿಸಿ ಪಿಕಪ್ ವಾಹನ ರಸ್ತೆಯ ಬದಿಯಲ್ಲಿರುವ ಮನೆಗೆ ನುಗ್ಗಿದ ಘಟನೆ ಮಣಿಹಳ್ಳ ಎಂಬಲ್ಲಿ ಶನಿವಾರ ರಾತ್ರಿ ವೇಳೆ ನಡೆದಿದೆ.

ಬಂಟ್ವಾಳ ಸಮೀಪದ ಮಣಿಹಳ್ಳ ಎಂಬಲ್ಲಿ ಘಟನೆ ನಡೆದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಪುಂಜಾಲಕಟ್ಟೆಯಿಂದ ಬರುತ್ತಿದ್ದ ಕಾರು ಬಂಟ್ವಾಳ ಕಡೆಯಿಂದ ಬರುತ್ತಿದ್ದ ಮೆಸ್ಕಾಂ ಇಲಾಖೆಗೆ ಸೇರಿದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ .

ಡಿಕ್ಕಿಯಿಂದ ತಪ್ಪಿ ಸಲು ಪ್ರಯತ್ನಿಸಿ ಪಿಕಪ್ ವಾಹನ ಚಾಲಕ ರಸ್ತೆ ಬದಿಯಲ್ಲಿ ದ್ದ ಮನೆಗೆ ನುಗ್ಗಿಸಿ ಮನೆಯ ಗೋಡೆ ಜರಿದು ಬಿದ್ದ ಘಟನೆ ಸಂಭವಿಸಿದೆ . ಮಣಿಹಳ್ಳ ನಿವಾಸಿ ಲಕ್ಷಣ್ ಎಂಬವರ ಮನೆ ಇದಾಗಿದೆ ಎಂದು ಹೇಳಲಾಗಿದೆ.

ಘಟನೆಯಿಂದ ಮನೆಯವರಿಗೆ ನಷ್ಟವಾಗಿದ್ದು, ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಮೂರ್ತಿ ಬೇಟಿ ನೀಡಿದ್ದಾರೆ.

- Advertisement -

Related news

error: Content is protected !!