Friday, April 19, 2024
spot_imgspot_img
spot_imgspot_img

ಬಂಟ್ವಾಳ : ಭೂಯಾ ಸ್ಪೋರ್ಟ್ಸ್‌ ಕ್ಲಬ್ ಹಾಗೂ ರಮಾನಾಥ ರೈ ಅಭಿಮಾನಿ ಬಳಗ ಇದರ ಸಹಯೋಗದಲ್ಲಿ “ಕಾಂಗ್ರೆಸ್ ಟ್ರೋಫಿ-2023” ಕ್ರಿಕೆಟ್ ಪಂದ್ಯಾಟ

- Advertisement -G L Acharya panikkar
- Advertisement -
vtv vitla

ಬಂಟ್ವಾಳ : ಯುವ ಸಮೂಹದ ಸದ್ಬಳಕೆಯು ದೇಶದ ಅಭಿವೃದ್ದಿಗೆ ಪೂರಕವಾಗಿದೆ. ಯುವ ಸಮುದಾಯದ ಸಕಾರಾತ್ಮಕ ಚಿಂತನೆಗಳಲ್ಲಿ ತೊಡಗಿಸಿಕೊಂಡಾಗ ಸಮಾಜದ ಎಲ್ಲ ರೀತಿಯ ದುಷ್ಚಟಗಳಿಗೆ ಕಡಿವಾಣ ಬೀಳುವುದರ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅಭಿಪ್ರಾಯಪಟ್ಟರು.

ಭೂಯಾ ಸ್ಪೋರ್ಟ್ಸ್‌ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಹಾಗೂ ರಮಾನಾಥ ರೈ ಅಭಿಮಾನಿ ಬಳಗ ಇದರ ಸಹಯೋಗದಲ್ಲಿ ಆಹ್ವಾನಿತ 16 ತಂಡಗಳ ನಿಗದಿತ ಓವರ್ ಗಳ “ಕಾಂಗ್ರೆಸ್ ಟ್ರೋಫಿ-2023” ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಪ್ರಯುಕ್ತ ಭಾನುವಾರ ಆಲಡ್ಕ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಿ ಸಿ ರೋಡು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಯುವ ಘಟಕಾಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ ಅಬ್ದುಲ್ ರಝಾಕ್ ಕುಕ್ಕಾಜೆ ಮಾತನಾಡಿದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಸಜಿಪಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಎನ್ ಕರೀಂ ಬೊಳ್ಳಾಯಿ, ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಜೆಟಿಟಿ, ಬಂಗ್ಲೆಗುಡ್ಡೆ ಕಾಂಗ್ರೆಸ್ ಬೂತ್ ಅಧ್ಯಕ್ಷ ಅಬ್ದುಲ್ ಖಾದರ್ ಪಿ ಬಿ, ಎನ್ ಎಸ್ ಯು ಐ ಪದಾಧಿಕಾರಿಗಳಾದ ವಿನಯ್, ನಜೀಬ್ ಮಂಚಿ, ಉದ್ಯಮಿಗಳಾದ ಸಿರಾಜ್ ಮದಕ, ಅಹ್ಮದ್ ಬಾವಾ ಯಾಸೀನ್, ಹಾಜಿ ಬಿ ಎ ಮುಹಮ್ಮದ್ ನೀಮಾ, ಅನ್ಸಾರ್ ಫಾರೆಸ್ಟ್ ಬೋಗೋಡಿ, ಕುಮುದಾ ಜೆ ಕುಡ್ವ , ಪ್ರಮುಖರಾದ ಶಮೀರ್ ನಂದಾವರ, ಪಿ ಬಿ ಶಾಫಿ ಹಾಜಿ ಆಲಡ್ಕ , ಶರೀಫ್ ತೋಟ, ಅಬ್ದುಲ್ ಮುತ್ತಲಿಬ್, ಹಬೀಬ್ ಆಲಡ್ಕ, ಅಶ್ರಫ್ ಉಪ್ಪುಗುಡ್ಡೆ , ಕಬೀರ್ ಬಂಗ್ಲೆಗುಡ್ಡೆ , ಶುಹೈಬ್ ಬೋಳಂಗಡಿ, ಇರ್ಶಾದ್ ಇಚ್ಚ ಬೋಗೋಡಿ, ಜಮಾಲ್ ಬಂಗ್ಲೆಗುಡ್ಡೆ , ಆರಿಫ್, ಹಿಶಾಂ, ಸಜ್ಜಾದ್, ಸಾಬಿತ್, ಮುನೀರ್ ಆಲಡ್ಕ , ಶಾಹಿದ್ ಎಸ್ ಎಸ್ ಮೊದಲಾದವರು ಭಾಗವಹಿಸಿದ್ದರು.

ಇದೇ ವೇಳೆ ಬಿ ರಮಾನಾಥ ರೈ ಅಭಿಮಾನಿ ಬಳಗದ ಟೀ ಶರ್ಟ್ ಬಿಡುಗಡೆಗೊಳಿಸಲಾಯಿತು. ಸ್ಥಳೀಯ ಉದ್ಯಮಿ, ನರಿಕೊಂಬು ಗ್ರಾಮದಲ್ಲಿ ಸ್ವಂತ ಖರ್ಚಿನಲ್ಲಿ ಅನಾಥಾಶ್ರಮ ನಿರ್ಮಿಸಿ ಅನಾಥರಿಗೆ ಹಾಗೂ ವೃದ್ದರಿಗೆ ಆಶ್ರಯ ಒದಗಿಸುತ್ತಿರುವ ಶ್ರೀಮತಿ ಕುಮುದಾ ಜೆ ಕುಡ್ವ ಅವರನ್ನು ಗೌರವಿಸಲಾಯಿತು

ಭೂಯಾ ಸ್ಪೋರ್ಟ್ಸ್‌ ಕ್ಲಬ್ ಅಧ್ಯಕ್ಷ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೀಫ್ ಭೂಯಾ ಸ್ವಾಗತಿಸಿ, ಶಫೀಕ್ ಯು ವಂದಿಸಿದರು, ಪತ್ರಕರ್ತ ಪಿ ಎಂ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.

ಫ್ರೆಂಡ್ಸ್ ಪರ್ಲಿಯಾ ತಂಡಕ್ಕೆ ಕಾಂಗ್ರೆಸ್ ಟ್ರೋಫಿ
ಆಹ್ವಾನಿತ 16 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ಫ್ರೆಂಡ್ಸ್ ಪರ್ಲಿಯಾ ತಂಡ ಚಾಂಪಿಯನ್ ಆಗಿ ಮೂಡಿ ಬಂದು ಕಾಂಗ್ರೆಸ್ ಟ್ರೋಫಿ-2023 ಗೆದ್ದುಕೊಂಡರೆ, ಟೀಂ ಭೂಯಾ ಆಲಡ್ಕ ರನ್ನರ್ಸ್ ಆಗಿ ಮೂಡಿ ಬಂತು. ಫೆಂಡ್ಸ್ ಪರ್ಲಿಯಾ ತಂಡದ ಆಶಿಶ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಆಸಿಫ್ ಉತ್ತಮ ದಾಂಡುಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಭೂಯಾ ಆಲಡ್ಕ ತಂಡದ ಇಂತಿಯಾಝ್ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಝಮಾನ್ ಬಾಯ್ಸ್ ಕಲ್ಲಡ್ಕ ಕ್ರಿಕೆಟ್ ತಂಡ ಅತ್ಯಂತ ಶಿಸ್ತಿನ ತಂಡ ಎಂಬ ಗೌರವಕ್ಕೆ ಪಾತ್ರವಾಯಿತು.

ರಫೀಕ್ ಮೆಜೆಸ್ಟಿಕ್, ರಶೀದ್ ಕತಾರ್, ಹಬೀಬ್ ಆಲಡ್ಕ ತೀರ್ಪುಗಾರರಾಗಿ ಸಹಕರಿಸಿದರು. ಸಲಾಲ್ ಗೂಡಿನಬಳಿ ಹಾಗೂ ಸಫಾಝ್ ಗೂಡಿನಬಳಿ ಅಂಕಪಟ್ಟಿ ನಿರ್ವಹಣೆಗೈದರು.

- Advertisement -

Related news

error: Content is protected !!